ಕರ್ನಾಟಕ

karnataka

ETV Bharat / bharat

ಪಾಕ್ ಪ್ರಧಾನಿಗೆ ಮತ್ತೊಂದು ಸಂಕಟ: ನೋಟಿಸ್ ಜಾರಿ ಮಾಡಿದ ಕೋರ್ಟ್​​​​

ಪಿಎಂಎಲ್-ಎನ್ ಅಧ್ಯಕ್ಷ ಶಹಬಾಜ್ ಷರೀಫ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ನ್ಯಾಯಾಲಯವು ಪ್ರಧಾನಿ ಇಮ್ರಾನ್ ಖಾನ್​​​ಗೆ ನೋಟಿಸ್ ನೀಡಿದೆ.

Pak court issues notice
ಸಂಗ್ರಹ ಚಿತ್ರ

By

Published : Jun 6, 2020, 2:31 PM IST

ಲಾಹೋರ್ :ಪಿಎಂಎಲ್- ಎನ್ ಅಧ್ಯಕ್ಷ ಶಹಬಾಜ್ ಷರೀಫ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ನ್ಯಾಯಾಲಯ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಮಾಜಿ ಪ್ರಧಾನಿಯಾಗಿದ್ದಂತಹ ಶಹಬಾಜ್ ಷರೀಫ್ ಹಾಗೂ ಅವರ ಅಣ್ಣ ನವಾಜ್ ಷರೀಫ್ ಅವರು ತಮ್ಮ ಸ್ನೇಹಿತನ ಮೂಲಕ ಪನಾಮ ಪೇಪರ್ ಪ್ರಕರಣವನ್ನು ಮುಚ್ಚಿ ಹಾಕಲು 61 ಮಿಲಿಯನ್ ಡಾಲರ್ ಲಂಚದ ಆಮಿಷವೊಡ್ಡಿದ್ದರು ಎಂದು 2017 ಏಪ್ರಿಲ್​​​​​​​​ನಲ್ಲಿ ಆರೋಪಿಸಿದ್ದರು.

ಶಹಬಾಜ್ ಷರೀಫ್ ಅವರು ಪಾಕಿಸ್ತಾನ ಮುಸ್ಲಿಂ ಲೀಗ್ - ನವಾಜ್ (ಪಿಎಂಎಲ್-ಎನ್) ನ ಮುಖ್ಯಸ್ಥರಾಗಿದ್ದು, ಪನಾಮ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2017 ರಲ್ಲಿ ಸುಪ್ರೀಂಕೋರ್ಟ್ ಪ್ರಧಾನಿ ಸ್ಥಾನದಿಂದ ಅನರ್ಹಗೊಳಿಸಿತು. ಪ್ರಸ್ತುತ ಷರೀಫ್ ಅವರು ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೇ ಇವರ ಮೇಲೆ ಅವೆನ್‌ಫೀಲ್ಡ್ ಪ್ರಾಪರ್ಟೀಸ್, ಫ್ಲ್ಯಾಗ್‌ಶಿಪ್ ಹೂಡಿಕೆ ಮತ್ತು ಅಲ್ - ಅಜೀಜಿಯಾ ಸ್ಟೀಲ್ ಮಿಲ್‌ಗಳು ಎಂಬ ಮೂರು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ.

ಆದಾಗ್ಯೂ ಖಾನ್ ಅವರು 61 ಮಿಲಿಯನ್ ಡಾಲರ್ ಆಮಿಷವೊಡ್ಡಿದ್ದ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ.

ಕಳೆದ ಮೂರು ವರ್ಷಗಳಿಂದ ಪ್ರಕರಣ ಸಂಬಂಧ ಖಾನ್ ಯಾವುದೇ ನಿಶ್ಚಿತ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಲಾಹೋರ್ ನ್ಯಾಯಾಲಯ ಶಹಬಾಜ್ ಅರ್ಜಿಯನ್ನು ವಿಚಾರಣೆ ನಡೆಸಿತು.

ABOUT THE AUTHOR

...view details