ನವದೆಹಲಿ:ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್‌ನ ಉಗ್ರತಾಣಗಳ ಮೇಲೆ ಏರ್ ಸ್ಟೈಕ್ ನಡೆಸಿತ್ತು. ಈ ವೇಳೆ ಪಾಕಿಸ್ತಾನದ ವಶವಾಗಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಅಲ್ಲಿನ ಕಮಾಂಡೋ ಅಹ್ಮದ್ ಖಾನ್ ಅರೆಸ್ಟ್ ಮಾಡಿದ್ದರು. ಇದೀಗ ಭಾರತೀಯ ಸೇನೆ ಆತನನ್ನು ಹೊಡೆದುರುಳಿಸಿದೆ.
ಅಭಿನಂದನ್ ಬಂಧಿಸಿದ ಪಾಕ್ ಯೋಧನನ್ನು ಹೊಡೆದುರುಳಿಸಿದ ಭಾರತೀಯ ಸೇನೆ!
ಪಾಕ್ನ ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದ ಸಂದರ್ಭದಲ್ಲಿ ಪಾಕ್ ಭೂಪ್ರದೇಶದಲ್ಲಿ ಬಿದ್ದಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಂಧಿಸಿದ್ದ ಪಾಕ್ ಕಮಾಂಡೋನನ್ನು ಭಾರತೀಯ ಸೇನೆ ಹತ್ಯೆಗೈದಿದೆ.
ಫೆಬ್ರವರಿ 27ರಂದು ಅಭಿನಂದನ್ ವರ್ಧಮಾನ್, ಮಿಗ್-21 ಯುದ್ಧವಿಮಾನದ ಮೂಲಕ ಪಾಕ್ನ ಎಫ್-16 ಫೈಟರ್ ಜೆಟ್‌ನ್ನು ಹೊಡೆದುರುಳಿಸಿದ್ದರು. ಈ ವೇಳೆ ಪಾಕ್ ಪ್ರದೇಶದಲ್ಲಿ ಅಭಿನಂದನ್ ವಿಮಾನವೂ ಪತನವಾಗಿತ್ತು. ಪ್ಯಾರಾಚೂಟ್ ಮೂಲಕ ಕೆಳಗೆ ಬಿದ್ದ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆದಿತ್ತು. ಬಳಿಕ ನಡೆದ ಬೆಳವಣಿಗೆಗಳಲ್ಲಿ ಪಾಕ್ ಗೌರವಪೂರ್ವಕವಾಗಿ ಅವರನ್ನು ವಾಘಾ ಗಡಿ ಮೂಲಕ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಅದಕ್ಕೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದಾರೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.