ಕರ್ನಾಟಕ

karnataka

ETV Bharat / bharat

ಪೇಜಾವರಶ್ರೀ,  ಜೇಟ್ಲಿ, ಸುಷ್ಮಾ, ಫರ್ನಾಂಡಿಸ್​​​ಗೆ ಮರಣೋತ್ತರ ಪದ್ಮ ವಿಭೂಷಣ - ಪದ್ಮ ವಿಭೂಷಣ ಪ್ರಶಸ್ತಿ

2020 ರ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಗೊಂಡಿದೆ. ಇದರಲ್ಲಿ ರಾಜ್ಯದ ಪೇಜಾವರ ಶ್ರೀ ಸೇರಿ 7 ಮಂದಿಗೆ ಪ್ರತಿಷ್ಠಿತ ಪ್ರಶಸ್ತಿಯ ಗೌರವ ನೀಡಲಾಗಿದೆ.

padma vibhushana award
ಪದ್ಮ ವಿಭೂಷಣ ಪ್ರಶಸ್ತಿ

By

Published : Jan 25, 2020, 9:38 PM IST

Updated : Jan 25, 2020, 10:41 PM IST

2020 ರ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಗೊಂಡಿದೆ. ಪೇಜಾವರ ಶ್ರೀ, ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅರುಣ್​ ಜೇಟ್ಲಿ, ಸುಷ್ಮಾ ಸ್ವರಾಜ್​ ಹಾಗೂ ಜಾರ್ಜ್​ ಫರ್ನಾಂಡಿಸ್ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕರ್ನಾಟಕದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿ (ಮರಣೋತ್ತರ), ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ (ಮರಣೋತ್ತರ), ಜಾರ್ಜ್ ಫರ್ನಾಂಡಿಸ್ (ಮರಣೋತ್ತರ), ಸುಷ್ಮಾ ಸ್ವರಾಜ್ (ಮರಣೋತ್ತರ), ಮಾರಿಷಸ್‌ನ ಮಾಜಿ ಪ್ರಧಾನಿ ಆನೆರೂಡ್ ಜುಗ್ನಾಥ್, ಕ್ರೀಡಾಪಟು ಎಂ.ಸಿ. ಮೇರಿ ಕೋಮ್, ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಚಾನುಲಾಲ್ ಮಿಶ್ರಾ ಅವರಿಗೆ ಎರಡನೇ ಅತ್ಯುನ್ನತ ಗೌರವವಾದ ಪದ್ಮವಿಭೂಷಣ ನೀಡಲಾಗಿದೆ.

ಈ ವರ್ಷ ರಾಷ್ಟ್ರಪತಿಗಳು 141 ಪದ್ಮ ಪ್ರಶಸ್ತಿಗಳನ್ನು ನೀಡಲು ಅನುಮೋದಿಸಿದ್ದಾರೆ. ಈ ಪಟ್ಟಿಯಲ್ಲಿ ಏಳು ಪದ್ಮವಿಭೂಷಣ, 16 ಪದ್ಮಭೂಷಣ ಮತ್ತು 118 ಪದ್ಮಶ್ರೀ ಪ್ರಶಸ್ತಿಗಳನ್ನ ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರಿದ್ದರೆ, ವಿದೇಶಿಯರು / ಎನ್‌ಆರ್‌ಐ / ಪಿಐಒ / ಒಸಿಐ ವಿಭಾಗದ 18 ವ್ಯಕ್ತಿಗಳು ಮತ್ತು 12 ಮರಣೋತ್ತರ ಪ್ರಶಸ್ತಿಗಳ ಘೋಷಿಸಲಾಗಿದೆ.

ಪದ್ಮ ವಿಭೂಷಣ

  • 1. ಜಾರ್ಜ್​ ಫರ್ನಾಂಡಿಸ್​ - ಮರಣೋತ್ತರ - ಬಿಹಾರ
  • 2. ಅರುಣ್​ ಜೇಟ್ಲಿ - ಮರಣೋತ್ತರ - ದೆಹಲಿ
  • 3 ಸರ್​ ಅನೆರೂಡ್​​ ಜುಗ್ನೌತ್​​ - ಮಾರಿಷಷ್​
  • 4. ಎಂ. ಸಿ. ಮ್ಯಾರಿ ಕೋಮ್​ - ಕ್ರೀಡೆ - ಮಣಿಪುರ
  • 5 ಚನ್ನುಲಾಲ್​ ಮಿಶ್ರಾ - ಕಲೆ - ಉತ್ತರ ಪ್ರದೇಶ
  • 6. ಸುಷ್ಮಾ ಸ್ವರಾಜ್​ - ಮರಣೋತ್ತರ - ದೆಹಲಿ
  • 7 ಪೇಜಾವರ ಶ್ರೀ - ಮರಣೋತ್ತರ ಕರ್ನಾಟಕ

ಪದ್ಮ ಭೂಷಣ

  • 8 . ಎಂ ಮುಮ್ತಾಜ್​ ಅಲಿ - ಅಧ್ಯಾತ್ಮ - ಕೇರಳ
  • 9. ಸಯ್ಯದ್​​ ಮೌಜೆಮ್​ ಅಲಿ - ಮರಣೋತ್ತರ - ಬಾಂಗ್ಲಾದೇಶ
  • 10. ಮುಮ್ತಾಜ್​​ ಹಸನ್​ ಬೇಗ್ - ಸಾರ್ವಜನಿಕ ವ್ಯವಹಾರ - ಜಮ್ಮು- ಕಾಶ್ಮೀರ
  • 11. ಅಜೋಯ್​ ಚಕ್ರವರ್ತಿ - ಕಲೆ - ಪಶ್ಚಿಮ ಬಂಗಾಳ
  • 12. ಮನೋಜ್​ ದಾಸ್​ - ಸಾಹಿತ್ಯ - ಪಾಂಡಿಚೇರಿ
  • 13. ಬಾಲಕೃಷ್ಣ ದೋಶಿ - ಆರ್ಟಿಕಲ್ಚರ್​ - ಗುಜರಾತ್
  • 14. ಕೃಷ್ಣಮಳ್ಳ ಜಗನ್ನಾಥ - ಸಾಮಾಜಿಕ ಕೆಲಸ - ತಮಿಳುನಾಡು
  • 15. ಸಿ ಜಮೀರ್​ - ಸಾರ್ವಜನಿಕ ವ್ಯವಹಾರ - ನಾಗಾಲ್ಯಾಂಡ್​
  • 16. ಅನಿಲ್​ ಪ್ರಕಾಶ್​ ಜೋಶಿ - ಸಾಮಾಜಿಕ ಕಾರ್ಯ - ಉತ್ತರಾಖಂಡ್
  • 17. ಡಾ. ತ್ಸೇರಿಂಗ್​ ಲಾಂಡೋಲ್​ - ವೈದ್ಯಕೀಯ - ಲಡಾಖ್​
  • 18. ಆನಂದ್ ಮಹಿಂದ್ರಾ - ಉದ್ಯಮ - ಮಹಾರಾಷ್ಟ್ರ
  • 19. ನೀಲಕಂಠ ರಾಮಕೃಷ್ಣ ಮಾಧವ ಮೆನನ್​ - ಮರಣೋತ್ತರ - ಕೇರಳ
  • 20. ಮನೋಹರ್​ ಪರಿಕ್ಕರ್​ - ಮರಣೋತ್ತರ - ಸಾಮಾಜಿಕ ವ್ಯವಹಾರ - ಗೋವಾ
  • 21. ಪ್ರೋ- ಜಗದೀಶ್ ಸೇಠ್​, ಸಾಹಿತ್ಯ - ಅಮೆರಿಕ
  • 22. ಪಿ.ವಿ ಸಿಂಧು - ಕ್ರೀಡೆ ತೆಲಂಗಾಣ
  • 23 ವೇಣು ಶ್ರೀನಿವಾಸನ್​ - ಉದ್ಯಮಿ - ತಮಿಳುನಾಡು
Last Updated : Jan 25, 2020, 10:41 PM IST

ABOUT THE AUTHOR

...view details