ಕರ್ನಾಟಕ

karnataka

ಸಿಂಧುನಾ... ಕೊಹ್ಲಿನಾ...? ಇದು 50 ಕೋಟಿ ಸ್ಪಾನ್ಸರ್​​ಶಿಪ್​ ಒಪ್ಪಂದ

By

Published : Feb 9, 2019, 12:27 PM IST

ಒಬ್ಬ ಶಟ್ಲರ್​ ವಿಶ್ವದಲ್ಲೇ ಅತ್ಯಂತ ಹೆಚ್ಚು ಆದಾಯ ಗಳಿಸುತ್ತಿರುವ ಕ್ರಿಕೆಟರ್​ ವಿರಾಟ್​ ಕೊಹ್ಲಿಗೆ ಸಮಾನವಾಗಿ ಸ್ಪಾನ್ಸರ್​ಶಿಪ್​( ವಾಣಿಜ್ಯ ಒಪ್ಪಂದ)ಕ್ಕೆ ಸಹಿ ಹಾಕಿದ್ದಾರೆ.

sindhu or virat!

ಹೈದರಾಬಾದ್​: ಕ್ರಿಕೆಟರ್​​ ಕೋಟಿ ಕೋಟಿ ಮೊತ್ತದ ಸ್ಪಾನ್ಸರ್​ಶಿಪ್​ ಒಪ್ಪಂದಕ್ಕೆ ಸಹಿ ಹಾಕುವುದರಲ್ಲಿ ಯಾವುದೇ ಅಚ್ಚರಿ ಇಲ್ಲವೇ ಇಲ್ಲ ಬಿಡಿ.. ಕ್ರಿಕೆಟ್​ ಅಂದರೆ ದೇಶದ ಪ್ರತಿಯೊಬ್ಬನಿಗೂ ಗೊತ್ತಿದ್ದಿದ್ದೇ ಇದೆ. ಅಷ್ಟೇ ಅಲ್ಲ ಅವರೆಲ್ಲ ಸ್ಟಾರ್​​ಗಳೇ ಆಗಿರುವುದರಿಂದ ಕೋಟಿ ಕೋಟಿ ಆದಾಯ ಅವರ ಮನೆಯಂಗಳಕ್ಕೆ ಹರಿದು ಬರುತ್ತದೆ.

ಆದರೆ, ಒಬ್ಬ ಶಟ್ಲರ್​ ಈಗ ಅಂತಹ ಭಾಗ್ಯ ಪಡೆದುಕೊಳ್ಳುತ್ತಿದ್ದಾರೆ. ಅದು ಒಬ್ಬ ಮಹಿಳೆ.. ಅದು ವಿಶ್ವದಲ್ಲೇ ಅತ್ಯಂತ ಹೆಚ್ಚು ಆದಾಯ ಗಳಿಸುತ್ತಿರುವ ಕ್ರಿಕೆಟರ್​ ವಿರಾಟ್​ ಕೊಹ್ಲಿಗೆ ಸಮಾನವಾಗಿ ಸ್ಪಾನ್ಸರ್​ಶಿಪ್​( ವಾಣಿಜ್ಯ ಒಪ್ಪಂದ)ಕ್ಕೆ ಸಹಿ ಹಾಕಿದ್ದಾರೆ.

ಅಂದ ಹಾಗೆ 50 ಕೋಟಿ ಮೊತ್ತದ ಸ್ಪಾನ್ಸರ್​ಶಿಪ್​ಗೆ ಸಹಿ ಹಾಕಿದವರು ಬೇರಾರು ಅಲ್ಲ ದೇಶದ ಖ್ಯಾತ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು. 2016 ರಲ್ಲಿ ರಿಯೋ ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ಮೇಲೆ ಸಿಂಧು ಪ್ರಸಿದ್ಧಿಗೆ ಬಂದರು. ಆ ಬಳಿಕ ಅವರು ಹಿಂತಿರುಗಿ ನೋಡಿಲ್ಲ.

ಇದೀಗ ಅವರು ಚೀನಾ ಕ್ರೀಡಾ ಉತ್ಪನ್ನಗಳನ್ನು ತಯಾರಿಸುವ ಲಿ ನಿಂಗ್ ಕಂಪನಿಯ ಜೊತೆ 50 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಆಟಗಾರರನ್ನು ಹೊರತು ಪಡಿಸಿ ಅತಿ ಹೆಚ್ಚು ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಈಗ ಸಿಂಧು ಪಾತ್ರರಾಗಿದ್ದಾರೆ.

ಲಿ ನಿಂಗ್​ ಕಂಪನಿ ನಾಲ್ಕು ವರ್ಷಕ್ಕೆ 50 ಕೋಟಿ ರೂ. ಸಂದಾಯ ಮಾಡಲಿದೆ. ಇದಲ್ಲದೇ ಏನೆಕ್ಸ್​ ಕಂಪನಿ ಒಪ್ಪಂದದಿಂದ ಪ್ರತಿವರ್ಷ 3.5 ಕೋಟಿ ರೂ ಪಡೆಯುತ್ತಿದ್ದರು. 2016 ರಲ್ಲೇ ಈ ಒಪ್ಪಂದ ಮಾಡಿಕೊಂಡಿದ್ದರು ಸಿಂಧು. ಈಗಾಗಲೇ ಪಿಎನ್‍ಬಿ ಮೆಟ್‍ಲೈಫ್, ವೈಜಾಗ್ ಸ್ಟೀಲ್, ಬ್ಯಾಂಕ್ ಆಫ್ ಬರೋಡಾ, ಆಪಿಸ್ ಹನಿ, ಜಾನ್ಸನ್ ಆಂಡ್ ಜಾನ್ಸನ್, ಮೂವ್, ಗ್ಯಾಟೋರೇಡ್, ಪ್ಯಾನಾಸೋನಿಕ್ ಬ್ಯಾಟರಿ, ಬ್ರಿಡ್ಜ್ ಸ್ಟೋನ್, ಮಿಶನ್ ಸ್ಫೋರ್ಟ್ಸ್, ಜೆಬಿಎಲ್, ಮಿಂಟ್ರಾ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದಾರೆ ಸಿಂಧು.

ಪುಮಾ ಜತೆ ಕೊಹ್ಲಿ 100 ಕೋಟಿ ರೂ ಒಪ್ಪಂದ

ಈ ನಡುವೆ ವಿರಾಟ್​ ಕೊಹ್ಲಿ ಪುಮಾ ಜತೆ 8 ವರ್ಷಗಳಿಗೆ 100 ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಅತಿದೊಡ್ಡ ಡೀಲ್​ ಆಗಿತ್ತು. ಆದರೆ ಸಿಂಧು ಕೇವಲ ನಾಲ್ಕು ವರ್ಷಕ್ಕೆ ಲಿ ನಿಂಗ್​ ಜತೆ 50 ಕೋಟಿ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡು ವಿರಾಟ್ ಕೊಹ್ಲಿ ಸಮಗಟ್ಟಿದ್ದಾರೆ.

ABOUT THE AUTHOR

...view details