ಕಾಸರಗೋಡು:ಜಿಲ್ಲೆಯ ಇಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ತಮ್ಮ ತರಗತಿಗಳೊಂದಿಗೆ ಆನ್‌ಲೈನ್ ಕಲಿಕೆಗೆ ನೆರವಾಗಲು ಡಿಜಿಟಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.
ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಾದ ರಂಜಿತ್ ಮತ್ತು ರಾಜೇಶ್ ಅವರು ‘ಪಿ ಟೀಚರ್’ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ವಿಕ್ಟರ್ಸ್ ಚಾನೆಲ್ ಮೂಲಕ ನೀಡಲಾಗುವ ಫಸ್ಟ್ ಬೆಲ್ ತರಗತಿಗಳಿಗೆ ಪೂರಕವಾದ ಪಾಠಗಳನ್ನು ಮತ್ತು ಅಧ್ಯಯನ ಸಾಮಗ್ರಿಗಳನ್ನು ನೀಡಲಾಗುತ್ತಿದೆ.
‘ಪಿ ಟೀಚರ್' ಆ್ಯಪ್ ಅಭಿವೃದ್ಧಿ ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು (ಒಂದರಿಂದ ನಾಲ್ಕನೇ ತರಗತಿವರೆಗೆ) ಡಿಜಿಟಲ್ ಅಪ್ಲಿಕೇಶನ್ ಮೂಲಕ ಇಂಗ್ಲಿಷ್ ಅಥವಾ ಮಲಯಾಳಂ ಭಾಷೆಗಳನ್ನು ಕಲಿಯಬಹುದು. ಚಟುವಟಿಕೆಗಳನ್ನು ಸಹ ಮಾಡಬಹುದು. ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಆಲೋಚನಾ ಪ್ರಕ್ರಿಯೆಯನ್ನು ಹೆಚ್ಚಿಸುವ ಮತ್ತು ಪಾಠಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುವ ಅನಿಮೇಷನ್ ವಿಡಿಯೋಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಕೇವಲ ಪಾಠಗಳನ್ನು ಓದುವುದಕ್ಕಿಂತ ಸಂವಾದಾತ್ಮಕ ಮಾದರಿಯನ್ನು ಆಧರಿಸಿ, ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ವಿದ್ಯಾರ್ಥಿಗಳು ತರಗತಿಯಲ್ಲಿನ ಕಲಿಕೆಯನ್ನು ಅನುಭವಿಸಬಹುದು ಎಂದು ರಾಜೇಶ್ ಮತ್ತು ರಂಜಿತ್ ಹೇಳುತ್ತಾರೆ.
1 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಈ ಅಪ್ಲಿಕೇಶನ್ ರಾಜ್ಯದ ಶಿಕ್ಷಣ ಇಲಾಖೆಗೆ ಬಹಳ ಅಮೂಲ್ಯವಾಗಿದೆ. ಉನ್ನತ ದರ್ಜೆಯ ವಿದ್ಯಾರ್ಥಿಗಳಿಗೆ ಪಾಠ ಮತ್ತು ಪೂರಕ ತರಗತಿಗಳನ್ನು ಸರ್ಕಾರದ ಬೆಂಬಲದೊಂದಿಗೆ ಒದಗಿಸಲು ಅಪ್ಲಿಕೇಶನ್ ನವೀಕರಿಸಬಹುದಾಗಿದೆ.