ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿಯ ಆ ಮೂರು ಮಾತುಗಳನ್ನ ಸ್ವಾಗತಿಸಿದ ಕಾಂಗ್ರೆಸ್ ನಾಯಕ

ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದ ಪ್ರಧಾನಿ ಮೋದಿ, ಜನಸಂಖ್ಯಾ ಸ್ಫೋಟ, ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಸಂಪತ್ತು ಸೃಷ್ಟಿಕರ್ತರಿಗೆ ಗೌರವ ಎನ್ನುವ ಅಂಶವನ್ನು ಉಲ್ಲೇಖಿಸಿದ್ದರು. ಈ ಅಂಶಗಳು ಈಗ ಕಾಂಗ್ರೆಸ್​ ನಾಯಕನ ಪ್ರಸಂಶೆಗೆ ಕಾರಣವಾಗಿವೆ.

ಕಾಂಗ್ರೆಸ್ ನಾಯಕ ಪಿ.ಚಿದಂಬರಂ

By

Published : Aug 16, 2019, 1:12 PM IST

ನವದೆಹಲಿ: 73ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯ ಭಾಗದ ಮೂರು ಪ್ರಮುಖ ಅಂಶವನ್ನು ಮಾಜಿ ವಿತ್ತ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಸ್ವಾಗತಿಸಿದ್ದಾರೆ.

ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದ ಪ್ರಧಾನಿ ಮೋದಿ, ಜನಸಂಖ್ಯಾ ಸ್ಫೋಟ, ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಸಂಪತ್ತು ಸೃಷ್ಟಿಕರ್ತರಿಗೆ ಗೌರವ ಎನ್ನುವ ಅಂಶವನ್ನು ಉಲ್ಲೇಖಿಸಿದ್ದರು.

ಪರಿಕ್ಕರ್ ಕನಸು, ಶುದ್ಧ ಕುಡಿವ ನೀರಿನ ಸಂಕಲ್ಪ... ಕೆಂಪುಕೋಟೆಯಿಂದ ಕೇಳಿಬಂತು ಈ ಎರಡು ಘೋಷಣೆ

ದೇಶದ ಪ್ರತಿಯೊಬ್ಬ ನಾಗರಿಕರೂ ಪ್ರಧಾನಿಯವರ ಮೂರು ಘೋಷಣೆಯನ್ನು ಪಕ್ಷಾತೀತವಾಗಿ ಸ್ವಾಗತಿಸಬೇಕು ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಸ್ವಾತಂತ್ರ್ಯ ಭಾಷಣದಲ್ಲಿ ಮೋದಿ ಮೂರು ಅಂಶಗಳ ಹೊರತಾಗಿ ಶುದ್ಧ ಕುಡಿಯುವ ನೀರಿಗಾಗಿ 'ಜಲ್​ ಜೀವನ್​ ಮಿಷನ್​' ಹಾಗೂ ಸೇನೆಯ ಮೂರು ವಿಭಾಗಕ್ಕೆ ಓರ್ವ ಮುಖ್ಯಸ್ಥನ ನೇಮಕ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ABOUT THE AUTHOR

...view details