ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲುಹಕ್ಕಿಯಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಇಂದು ಕಾಂಗ್ರೆಸ್ನ ಹಿರಿಯ ನಾಯಕರು ಭೇಟಿ ಮಾಡಿದರು. ಈ ಭೇಟಿ ಬಳಿಕ ಟ್ವೀಟ್ ಮಾಡಿದ ಚಿದು ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಚಿನ್ನದ ರೆಕ್ಕೆ ಮತ್ತು ಚಂದ್ರನತ್ತ ಪಯಣ... ಟ್ವೀಟ್ ಮೂಲಕ ಸಿಬಿಐಗೆ ಚಿದು ಗುದ್ದು..!
ತಮ್ಮ ಕುಟುಂಬಸ್ಥರ ಮೂಲಕ ಟ್ವೀಟ್ ಮಾಡಿರುವ ಚಿದಂಬರಂ, ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಡಾ.ಮನಮೋಹನ್ ಸಿಂಗ್ ಇಂದು ನನ್ನನ್ನು ಭೇಟಿ ಮಾಡಿರುವುದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ. ರಾಷ್ಟ್ರೀಯ ಕಾಂಗ್ರೆಸ್ ಎಲ್ಲಿಯ ತನಕ ಶಕ್ತಿಯುತ ಹಾಗೂ ಧೈರ್ಯವಾಗಿತ್ತದೋ ಅಲ್ಲಿಯ ತನಕ ನಾನೂ ಧೈರ್ಯದಿಂದ ಇರುತ್ತೇನೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಸೆ.20ರಂದು ದೆಹಲಿಯ ಸಿಬಿಐ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಅ.3ರ ತನಕ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಹೀಗಾಗಿ ಇನ್ನೊಂದು ವಾರ ಮಾಜಿ ಕೇಂದ್ರ ಸಚಿವ ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ.