ನವದೆಹಲಿ: ಅಮೆರಿಕ ಚುನಾವಣೆಯ ಅಧ್ಯಕ್ಷೀಯ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಅವರನ್ನು ಉಲ್ಲೇಖಿಸಿ ಕಾಂಗ್ರೆಸ್ ಸಂಸದ ಪಿ ಚಿದಂಬರಂ ಅವರು ಅಕ್ಟೋಬರ್ 28ರಿಂದ ಪ್ರಾರಂಭವಾಗುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿರುವ ಬಿಹಾರದ ಜನರು'ಭಯದ ಮೇಲೆ ಭರವಸೆ, ವಿಭಜನೆಯ ಮೇಲೆ ಏಕತೆ ಮತ್ತು ಸುಳ್ಳಿನ ಮೇಲೆ ಸತ್ಯ' ಎಂಬ ಬದ್ಧತೆ ಮೇಲೆ ಮತ ಚಲಾಯಿಸುವ ನಿರ್ಧಾರ ಕೈಗೊಳ್ಳುವಂತೆ ಕರೆ ನೀಡಿದ್ದಾರೆ.
ಇಂದು ಬೆಳಗ್ಗೆ ಟ್ವಿಟರ್ ಪೋಸ್ಟ್ ಮಾಡಿದ ಚಿದಂಬರಂ ಅವರು ಅಮೆರಿಕ ಅಧ್ಯಕ್ಷ ಸ್ಥಾನಕ್ಕಾಗಿ ಡೊನಾಲ್ಡ್ ಟ್ರಂಪ್‌ಗೆ ಸವಾಲು ಹಾಕುತ್ತಿರುವಾಗ ಬಿಡನ್ ಅವರು ಪದೇ ಪದೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಭಾರತದಾದ್ಯಂತ ಜನರು ಇದೇ ರೀತಿಯ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಅಮೆರಿಕ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ನಿನ್ನೆ ಹೇಳಿದರು, 'ನಾವು ಭಯದ ಮೇಲೆ ಭರವಸೆ, ವಿಭಜನೆಯ ಮೇಲೆ ಏಕತೆ, ಕಲ್ಪನೆಯ ಮೇಲೆ ವಿಜ್ಞಾನ ಮತ್ತು ಸುಳ್ಳಿನ ಮೇಲೆ ಸತ್ಯ' ಎಂದು ಹೇಳಿದ್ದರು. ಅದು ಒಳ್ಳೆಯ ಪ್ರತಿಜ್ಞೆ. ಬಿಹಾರ, ಮಧ್ಯಪ್ರದೇಶ ಮತ್ತು ಇತರೆಡೆ ಜನರು ಈ ತಿಂಗಳು ಮತದಾನ ಕೇಂದ್ರಗಳಿಗೆ ಹೋದಾಗ ಅದನ್ನೇ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಚಿದಂಬರಂ ಅವರು ನ್ಯೂಜಿಲ್ಯಾಂಡ್ ಚುನಾವಣೆಯ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರ ಕೇಂದ್ರದ ಎಡ ಸರ್ಕಾರವು ನಿನ್ನೆ ಅಭೂತಪೂರ್ವ ಬಹುಮತದೊಂದಿಗೆ ಗೆದ್ದಿದೆ. ಸಭ್ಯತೆ ಮತ್ತು ಪ್ರಗತಿಪರ ಮೌಲ್ಯಗಳು ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದನ್ನ ಈ ಗೆಲುವು ಸೂಚಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.