ನವದೆಹಲಿ:ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ ನವದೆಹಲಿಯ ಲೋಧಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಅದಕ್ಕೂ ಮೊದಲು ಅನೇಕ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಕೆ ಮಾಡಿದರು.
ಸುಷ್ಮಾ ಸ್ವರಾಜ್ ಪಾದದ ಬಳಿ ಬಿಕ್ಕಿಬಿಕ್ಕಿ ಅತ್ತ ಎಂಡಿಹೆಚ್ ಮಸಾಲ ಕಂಪನಿ ಮಾಲೀಕ! - mahashay Dharampal Gulati
ಮಂಗಳವಾರ ಇಹಲೋಕ ತ್ಯಜಿಸಿದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ ಇಂದು ನವದೆಹಲಿಯ ಲೋಧಿ ಸ್ಮಶಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಇದಕ್ಕೂ ಮೊದಲು ಸುಷ್ಮಾ ಪಾರ್ಥಿವ ಶರೀರವನ್ನು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಈ ವೇಳೆ, ಎಂಡಿಹೆಚ್ ಮಸಾಲ ಕಂಪನಿ ಮಾಲೀಕ ಪಾರ್ಥಿವ ಶರೀರದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಸ್ವರಾಜ್ ಪಾದದ ಬಳಿ ಬಿಕ್ಕಿಬಿಕ್ಕಿ ಅತ್ತ ಎಂಡಿಹೆಚ್ ಮಸಾಲ ಕಂಪನಿ ಮಾಲೀಕ
ಈ ವೇಳೆ, ಭಾರತದ ಖ್ಯಾತ ಮಸಾಲ ಕಂಪನಿ ಎಂಡಿಹೆಚ್ ಮಾಲೀಕ 96 ವರ್ಷದ ಧರ್ಮಪಾಲ್ ಗುಲಾಟಿ ಸುಷ್ಮಾ ಸ್ವರಾಜ್ ಅವರ ಕಾಲಿನ ಬಳಿ ಕುಳಿತು ಕಣ್ಣೀರು ಹಾಕಿದ್ದಾರೆ. ತ್ರಿವರ್ಣ ಧ್ವಜ ಹೊದಿಸಿದ್ದ ಸುಷ್ಮಾರ ಪಾರ್ಥಿವ ಶರೀರವನ್ನು ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಗುಲಾಟಿಯವರು ತಮ್ಮ ಮಸಾಲ ಉತ್ಪನ್ನದ ಟ್ರೇಡ್ಮಾರ್ಕ್ ಬಣ್ಣವಾದ ಕೆಂಪು ಪಗ್ಡಿ ಧರಿಸಿದ್ದರು. ತಮ್ಮ ಬಗ್ಗೆಯಾಗಲಿ ಅಥವಾ ತಮ್ಮ ವಯಸ್ಸಿನ ಬಗ್ಗೆಯಾಗಲಿ ಚಿಂತಿಸದ ಗುಲಾಟಿ, ಸುಷ್ಮಾರ ಮೃತದೇಹದ ಮುಂದೆ ಗಳಗಳನೆ ಅತ್ತಿದ್ದಾರೆ.