ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಹಣಕಾಸು ಕ್ಷೇತ್ರವನ್ನು ಮತ್ತಷ್ಟು ಬಲಗೊಳಿಸಲು ಮೂಲಸೌಕರ್ಯ ಸಮಸ್ಯೆಗಳನ್ನು ನಿವಾರಿಸುವುದೊಂದೇ ಮಾರ್ಗ - 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಮೂಲಸೌಕರ್ಯ ಸೌಲಭ್ಯಕ್ಕಾಗಿ 52 ಲಕ್ಷ ಕೋಟಿ

ಐದು ವರ್ಷಗಳಲ್ಲಿ ಭಾರತವನ್ನು 5 ಬಿಲಿಯನ್ ಡಾಲರ್ ಪ್ರಬಲ ಆರ್ಥಿಕತೆಯ ರಾಷ್ಟ್ರವನ್ನಾಗಿ ಪರಿವರ್ತಿಸುವುದಾಗಿ ಮೋದಿ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಅದರ ಭಾಗವಾಗಿ ಮೂಲಸೌಕರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು 1 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಘೋಷಿಸಿತ್ತು. ಈ ಮೂಲಕ ಭಾರತವನ್ನು ವಿಶ್ವದಲ್ಲಿ ಆರ್ಥಿಕವಾಗಿ ಸದೃಢಗೊಳಿಸುವುದಾಗಿ ಸ್ವತಃ ಪ್ರಧಾನಿ ಮೋದಿ ಹೇಳಿದ್ದರು.

overcome-infrastructure-issues-to-boost-finance-sector
ಹಣಕಾಸು ಕ್ಷೇತ್ರವನ್ನು ಮತ್ತಷ್ಟು ಬಲಗೊಳಿಸಲು ಮೂಲಸೌಕರ್ಯ ಸಮಸ್ಯೆಗಳನ್ನು ನಿವಾರಿಸುವುದೊಂದೇ ಮಾರ್ಗ

By

Published : Jan 3, 2020, 8:37 PM IST

ಐದು ವರ್ಷಗಳಲ್ಲಿ ಭಾರತವನ್ನು 5 ಬಿಲಿಯನ್ ಡಾಲರ್ ಪ್ರಬಲ ಆರ್ಥಿಕತೆಯ ರಾಷ್ಟ್ರವನ್ನಾಗಿ ಪರಿವರ್ತಿಸುವುದಾಗಿ ಮೋದಿ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಅದರ ಭಾಗವಾಗಿ ಮೂಲಸೌಕರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು 1 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಘೋಷಿಸಿತ್ತು. ಈ ಮೂಲಕ ಭಾರತವನ್ನು ವಿಶ್ವದಲ್ಲಿ ಆರ್ಥಿಕವಾಗಿ ಸದೃಢಗೊಳಿಸುವುದಾಗಿ ಸ್ವತಃ ಪ್ರಧಾನಿ ಮೋದಿ ಹೇಳಿದ್ದರು.

ಹಣಕಾಸು ಕಾರ್ಯದರ್ಶಿ ಅತನು ಚಕ್ರವರ್ತಿ ನೇತೃತ್ವದ ಹಿರಿಯ ಅಧಿಕಾರಿಗಳ ತಂಡವು 18 ರಾಜ್ಯಗಳಲ್ಲಿ 102 ಲಕ್ಷ ಕೋಟಿ ರೂ. ಖರ್ಚು ವೆಚ್ಚದ ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಕೂಡ ಸಿದ್ಧಪಡಿಸಿತ್ತು.

ಈ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಸೂಚಿಯನ್ನು ಮಂಡಿಸಿದ್ದಾರೆ. ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿ ಕಾರ್ಯಸೂಚಿಯನ್ನು ಹಣಕಾಸು ಮತ್ತು ಸಾಮಾಜಿಕ ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ.

ಕ್ಷೇತ್ರವಾರು ನಿಧಿ ಹಂಚಿಕೆಯನ್ನು ಗಮನಿಸಿದರೆ, ವಿದ್ಯುತ್ ಮತ್ತು ಇಂಧನ ವಲಯ 24 ಪ್ರತಿಶತ ನಿಧಿಯೊಂದಿಗೆ ಗರಿಷ್ಠ ಪಾಲು ಪಡೆದುಕೊಂಡಿವೆ. ರಸ್ತೆ ಕಾಮಗಾರಿಗೆ 19 ಪ್ರತಿಶತ, ನಗರಾಭಿವೃದ್ಧಿ 16 ಪ್ರತಿಶತ ಮತ್ತು ರೈಲ್ವೆ 13 ಪ್ರತಿಶತ ನಿಧಿಯನ್ನು ಮೀಸಲಿಡಲಾಗಿದೆ. ಗ್ರಾಮೀಣಾಭಿವೃದ್ಧಿ ಶೇಕಡಾ 8ರಷ್ಟು ಪಾಲು ಪಡೆದರೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಮತ್ತು ಇತರ ಸಾಮಾಜಿಕ ಖಾತೆ ಶೇ 3 ರಷ್ಟು ಹಣವನ್ನು ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತದೆ.

ಉದ್ದೇಶಿತ ಮೂಲಸೌಕರ್ಯ ಅಭಿವೃದ್ಧಿ ಕ್ರಿಯಾ ಯೋಜನೆಯನ್ನು ಎಲ್ಲಾ ಹಂತಗಳಲ್ಲಿಯೂ ಸರಿಯಾಗಿ ಅನುಷ್ಠಾನಗೊಳಿಸಿದರೆ ದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಮತ್ತು ದೇಶದಲ್ಲಿನ ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುತ್ತವೆ ಎಂದು ಅಂದಾಜಿಸುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.

ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರ್ಚು ಮಾಡಬೇಕಾದ ಮೂಲ ಮೊತ್ತದ ಬಗ್ಗೆ ಅನುಮಾನಗಳು ಎದ್ದಿವೆ. ಕೇಂದ್ರ ಮತ್ತು ರಾಜ್ಯಗಳು ತಲಾ 39 ಪ್ರತಿಶತ ಮತ್ತು ಖಾಸಗಿ ವಲಯದಿಂದ 22 ಪ್ರತಿಶತವನ್ನು ಹಂಚಿಕೊಂಡರೆ ನಿಗದಿತ ಗುರಿಗಳನ್ನು ಸರಾಗವಾಗಿ ತಲುಪಲಾಗುವುದು ಎಂಬ ಹಣಕಾಸು ಸಚಿವರು ತುಂಬ ಸುಲಭವಾಗಿ ಮತ್ತು ಸುಂದರವಾಗಿ ವಿವರಿಸುತ್ತಾರೆ.

ಆ ಅಂದಾಜಿನ ಪ್ರಕಾರ, ರಾಜ್ಯಗಳು ಸುಮಾರು 40 ಲಕ್ಷ ಕೋಟಿ ರೂ. ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯಗಳಿಗೆ ಈ ಮೊತ್ತವು ಅಸಹನೀಯ ಹೊರೆಯಾಗಲಿದೆ ಎಂಬುದರಲ್ಲಿ ಯಾವುದೇ ವಿವಾದಗಳಿಲ್ಲ. ಮೂಲಸೌಕರ್ಯ ಕಾರ್ಯಸೂಚಿಯು ಆರ್ಥಿಕ ಕುಸಿತಕ್ಕೆ ಸರಿಯಾದ ಚಿಕಿತ್ಸೆಯಾಗಿದೆ ಎಂದು ತೋರುತ್ತದೆಯಾದರೂ, ವಿಶಿಷ್ಟವಾದ ಪ್ರಶ್ನೆಯೆಂದರೆ ಅದು ಎಷ್ಟು ದೂರದಲ್ಲಿ ವಾಸ್ತವವಾಗುತ್ತದೆ ಎಂಬುದು.

ವಿತ್ತ ಸಚಿವರ ಈ ಲೆಕ್ಕಚಾರದಂತೆ ನೋಡಿದರೆ, ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯಗಳು ಸುಮಾರು 40 ಲಕ್ಷ ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಈಗಾಗಲೇ ಬರ, ನೆರೆ ಸೇರಿದಂತೆ ವಿವಿಧ ಕಾರಣಗಳಿಂದ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯಗಳಿಗೆ ಈ ಮೊತ್ತವು ಖಂಡಿತವಾಗಿ ಅಸಹನೀಯ ಹೊರೆಯಾಗಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮೇಲ್ನೋಟಕ್ಕೆ ಮೂಲಸೌಕರ್ಯ ಕಾರ್ಯಸೂಚಿಯು ಆರ್ಥಿಕ ಕುಸಿತಕ್ಕೆ ಸರಿಯಾದ ಚಿಕಿತ್ಸೆಯಾಗಿದೆ ಎಂದು ತೋರುತ್ತದೆಯಾದರೂ, ಅದು ಕಾರ್ಯಾನುಷ್ಠಾನಕ್ಕೆ ಬರಲು ಎಷ್ಟು ದೂರದಲ್ಲಿದೆ ಎಂಬ ವಾಸ್ತವವು ವಿಶಿಷ್ಟವಾದ ಪ್ರಶ್ನೆಯನ್ನು ನಮ್ಮಲ್ಲಿ ಉದ್ಭವಿಸುವಂತೆ ಮಾಡುವುದು ಸುಳ್ಳಲ್ಲ.

ರಾಷ್ಟ್ರೀಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖವಾಗಿರುವ, ಬೆನ್ನೆಲುಬು ಎನಿಸಿರುವ ಎಂಟು ಕೈಗಾರಿಕಾ ವಲಯಗಳು ಸತತ ನಾಲ್ಕು ತಿಂಗಳುಗಳಿಂದ ನಷ್ಟದ ಹಾದಿಯಲ್ಲಿದ್ದು, ಋಣಾತ್ಮಕ ಫಲಿತಾಂಶಗಳನ್ನು ತೋರಿಸುತ್ತಿರುವುದು ಮುಖ್ಯವಾಗಿ ಆತಂಕಕ್ಕೆ ಕಾರಣವಾಗಿದೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಉಕ್ಕು ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿನ ಕಳಪೆ ವಹಿವಾಟು ಸಾಧನೆಯು ದೇಶದಲ್ಲಿನ ಆರ್ಥಿಕ ಕುಸಿತದ ದುಷ್ಪರಿಣಾಮಗಳನ್ನು ಪ್ರತಿಬಿಂಬಿಸುತ್ತಿವೆ.

ಸಿಮೆಂಟ್ ಉತ್ಪಾದನೆಯಲ್ಲಿನ ಬೆಳವಣಿಗೆಯೂ ನವೆಂಬರ್‌ ತಿಂಗಳಿನಲ್ಲಿ ಅರ್ಧದಷ್ಟು ಕುಸಿದಿದೆ. ರಸ್ತೆಗಳು, ಹಡಗು ಬಂದರು, ವಿದ್ಯುತ್ ಮತ್ತು ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ನಿರ್ಮಾಣ ಚಟುವಟಿಕೆಯನ್ನು ಪ್ರಾರಂಭಿಸುವ ಮೂಲಕ ಸಿಮೆಂಟ್ ಮತ್ತು ಉಕ್ಕಿನ ಕ್ಷೇತ್ರಗಳ ಸಕಾರಾತ್ಮಕ ಬೆಳವಣಿಗೆಗೆ ಸಹಕಾರಿಯಾಗಬಹುದು. ದೇಶಾದ್ಯಂತ ದೊಡ್ಡ ಉದ್ಯಮವು ಮೂಲಸೌಕರ್ಯ ಸೌಲಭ್ಯಗಳಿಗೆ ಉತ್ತೇಜನ ನೀಡುವುದನ್ನು ಖಚಿತಪಡಿಸುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ.

ಆದಾಗ್ಯೂ, ಈ ವಿಷಯದಲ್ಲಿ ತಜ್ಞರು ಎತ್ತಿರುವ ಆಕ್ಷೇಪಣೆಗಳು ಮತ್ತು ಸರ್ಕಾರದ ಅಧಿಕೃತ ಹೇಳಿಕೆಗಳ ನಡುವೆ ಯಾವುದೇ ಸಮಾನತೆಯಿಲ್ಲ. ಐದು ವರ್ಷಗಳಲ್ಲಿ ಸುಮಾರು 40 ಲಕ್ಷ ಕೋಟಿ ರೂಗಳನ್ನು ಖರ್ಚು ಮಾಡುವ ಕೇಂದ್ರದ ಯೋಜನೆ ಈಗ ಖರ್ಚು ಮಾಡುತ್ತಿರುವ ಮೊತ್ತಕ್ಕಿಂತ ದೊಡ್ಡ ಮೊತ್ತವಲ್ಲ ಎಂಬ ವಿಶ್ಲೇಷಣೆಯನ್ನು ನಾವು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ.

12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಮೂಲಸೌಕರ್ಯ ಸೌಲಭ್ಯಕ್ಕಾಗಿ 52 ಲಕ್ಷ ಕೋಟಿ ರೂ. ಬೇಕು ಎಂದು ಅಂದಾಜಿಸಿತ್ತು. ಏಳು ವರ್ಷಗಳ ಹಿಂದೆ ದೀಪಕ್ ಪರೇಖ್ ಸಮಿತಿಯು ಸಲ್ಲಿಸಿದ ವರದಿಯ ಪ್ರಕಾರ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಶೇಕಡಾ 47 ರಷ್ಟು ಹಣವನ್ನು ಸಂಗ್ರಹಿಸುವುದು ಈ ಯೋಜನೆಯಲ್ಲಿ ಸೇರಿದೆ.

ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ಅಸ್ಸೋಚಾಮ್ ಮತ್ತು ಕ್ರಿಸಿಲ್ ಜಂಟಿಯಾಗಿ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, ಮೂಲ ಸೌಕರ್ಯ ಅಭಿವೃದ್ಧಿ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸುವಲ್ಲಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸ್ಪಷ್ಟಪಡಿಸಿವೆ. ಆದರೆ ಪ್ರಸ್ತುತದ ಸ್ಥಿತಿಯಲ್ಲಿ ದೇಶದ ಬ್ಯಾಂಕ್‌ಗಳು ವಸೂಲಿ ಮಾಡಲಾಗದ ಸಾಲಗಳ ವಿಶಿಷ್ಟ ಸಮಸ್ಯೆಯನ್ನು ಎದುರಿಸುತ್ತಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳಿಗೆ ಮೊದಲ ಎಂಟು ತಿಂಗಳ ಬ್ಯಾಂಕ್ ಸಾಲವು ಶೇಕಡಾ 3.9 ರಷ್ಟು ಕಡಿಮೆಯಾಗಿದೆ.

ಅಗತ್ಯ ಅನುಮತಿಗಳನ್ನು ನೀಡುವಲ್ಲಿ ಅತಿಯಾದ ವಿಳಂಬದಂತಹ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲಾಗುವ ಯಾವುದೇ ಸಮಸ್ಯೆಯನ್ನು ಪರಿಹರಿಸದೆ ಕೇಂದ್ರ ಸರ್ಕಾರವು ದೇಶದ ಮೂಲ ಸೌಕರ್ಯ ಅಭಿವೃದ್ಧಿಯ ತನ್ನ ಹೊಸ ಗುರಿಯನ್ನು ತಲುಪುವ ವಿಶ್ವಾಸದಲ್ಲಿದೆ.

ದೇಶದಾದ್ಯಂತ ಹಿಮದ ಕಂಬಳಿಯಂತೆ ಹಬ್ಬುತ್ತಿರುವ ಆರ್ಥಿಕ ಹಿಂಜರಿತದ ಪರಿಣಾಮವಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಸಾಲದ ಲಭ್ಯತೆಯ ಕುಸಿತ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕೊರತೆಗೆ ಕಾರಣವಾಗಿದೆ. ಸಮರ್ಥ ನೀತಿ ನಿರ್ಧಾರಗಳ ಕೊರತೆಯಿಂದಾಗಿ, ಖಾಸಗಿ ಹೂಡಿಕೆಗಳು ಮತ್ತು ರಫ್ತುಗಳು ಅವನತಿಯ ಹಾದಿಯಲ್ಲಿವೆ. ಇಷ್ಟಾಗಿಯೂ ಸರ್ಕಾರ ಇವುಗಳನ್ನು ಪರಿಹರಿಸುವತ್ತ ದೃಷ್ಟಿ ಹಾಯಿಸುತ್ತಿಲ್ಲ. ಹೀಗಾಗಿ ದೇಶದ ಆರ್ಥಿಕ ಪರಿಸ್ಥಿತಿ ಅಂತಿಮವಾಗಿ ಇನ್ನಷ್ಟು ಹದಗೆಟ್ಟಿದೆ.

ಇದರಿಂದಾಗಿ ಆದಾಯದ ಅಂದಾಜಿನ ಲೆಕ್ಕಾಚಾರ ಹಳಿ ತಪ್ಪಿದೆ ಮತ್ತು ರಾಜ್ಯಗಳ ಖಜಾನೆಗಳು ಸಂಗ್ರಹಣೆ ಇಲ್ಲದೆ ತತ್ತರಿಸಿವೆ. ತನ್ನ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಸೂಚಿಯೊಂದಿಗೆ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು, ವಾಸ್ತವಿಕ ಸ್ಥಿತಿಯೊಂದಿಗೆ ಈ ಸಮಸ್ಯೆಯನ್ನು ಪರಿಶೀಲಿಸಿ, ನಿರ್ಲಕ್ಷಿಸಲು ಸಾಧ್ಯವಿಲ್ಲ.

ವ್ಯಾಪಾರ ಸೂಚ್ಯಂಕವನ್ನು ಸುಲಭವಾಗಿಸಲು ಭಾರತವು ಸಫಲವಾಗಿದ್ದು, ಐದು ವರ್ಷಗಳ ಹಿಂದೆ ಇದ್ದ 143 ನೇ ಸ್ಥಾನದಿಂದ ಉತ್ತಮ ಸಾಧನೆ ತೋರಿ 63ನೇ ಸ್ಥಾನ ತಲುಪಿದೆ . ಆದರೂ, ಒಪ್ಪಂದಗಳನ್ನು ಅನುಷ್ಠಾನಗೊಳಿಸುವಲ್ಲಿ 163 ಶ್ರೇಯಾಂಕಗಳನ್ನು ಮತ್ತು ಆಸ್ತಿಗಳ ನೋಂದಣಿಯಲ್ಲಿ 154 ಶ್ರೇಣಿಯನ್ನು ಪಡೆದುಕೊಳ್ಳುವ ಮೂಲಕ ಇದು ನೀರಸ ಪ್ರದರ್ಶನವನ್ನು ನೀಡಿದೆ.

ವಿಶೇಷವೆಂದರೆ, ದೇಶದಲ್ಲಿನ ಈಗಿನ ಕಳಪೆ ಆರ್ಥಿಕ ಸ್ಥಿತಿ ಮತ್ತು ಸಾಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ದೋಷಪೂರಿತ ಹೆಜ್ಜೆಗಳು ಕಾರಣ ಎಂದು ಹಣಕಾಸು ಸಚಿವರ ಸಲಹೆಗಾರ ಸಂಜೀವ್ ಸನ್ಯಾಲ್ ಅವರು ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದಾರೆ. ಈ ನಿರ್ಣಾಯಕ ಹಂತದಲ್ಲಿ, ಆರ್ಥಿಕ ದಿವಾಳಿತನದಿಂದಾಗಿ ಸಂಬಂಧಿತ ಒಪ್ಪಂದಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವ ಸರ್ಕಾರವನ್ನು ತಜ್ಞರು ನೇರವಾಗಿ ಪ್ರಶ್ನಿಸುತ್ತಾರೆ.

ವಿಮಾನ ನಿಲ್ದಾಣಗಳ ಸೌಲಭ್ಯಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮೂಲಸೌಕರ್ಯ ಸೂಚ್ಯಂಕ 2019 ರ ಪ್ರಕಾರ - ಮಲೇಷ್ಯಾ ಭಾರತಕ್ಕಿಂತ ಉತ್ತಮ ಪ್ರದರ್ಶನ ನೀಡಿದೆ. ಚೀನಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ ಮತ್ತು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ರಸ್ತೆಗಳ ಗುಣಮಟ್ಟ ಅಷ್ಟು ಉತ್ತಮವಾಗಿಲ್ಲ ಮತ್ತು ತಕ್ಷಣದಲ್ಲಿ ಅವುಗಳ ದುರಸ್ಥಿ ಕಾರ್ಯ ಅಗತ್ಯವಿದೆ.

ಅಲ್ಲದೆ, ಕ್ರಿಯಾ ಯೋಜನೆ ಮತ್ತು ಅಗತ್ಯ ವಿಧಾನಗಳೊಂದಿಗೆ ನೈಸರ್ಗಿಕ ವಿಪತ್ತು ಮತ್ತು ಪ್ರವಾಹವನ್ನು ತಡೆಗಟ್ಟುವಲ್ಲಿ ಭಾರತ ಚೀನಾ, ಸೌದಿ ಅರೇಬಿಯಾ ಮತ್ತು ಜರ್ಮನಿಗಿಂತ ಹಿಂದುಳಿದಿದೆ. ಕುತೂಹಲಕಾರಿಯಾಗಿ, ನುರಿತ ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೊಂದಿರುವ ಡೆನ್ಮಾರ್ಕ್, ನ್ಯೂಜಿಲೆಂಡ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್‌ನಂತಹ ರಾಷ್ಟ್ರಗಳು ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಸಮರ್ಥವಾಗಿವೆ. ಆದರೆ ಭಾರತ ಆ ಕ್ಷೇತ್ರದಲ್ಲಿಯೂ ಹಿಂದುಳಿದಿರುವುದು ಆರ್ಥಿಕ ಹಿಂಜರಿತದ ದುಷ್ಪರಿಣಾಮಕ್ಕೆ ಹಿಡಿದ ಕನ್ನಡಿಯಾಗಿದೆ.

ವ್ಯಾಪಾರದ ಅಡೆತಡೆಗಳನ್ನು ತೆರವುಗೊಳಿಸುವುದರ ಜೊತೆಗೆ, ಅಂತಹ ಅನುಭವಗಳಿಂದ ಅಮೂಲ್ಯವಾದ ಪಾಠಗಳನ್ನು ಕಲಿಯುವ ಮೂಲಕ ಭಾರತ ತನ್ನ ಮೂಲಸೌಕರ್ಯ ಕ್ಷೇತ್ರವನ್ನು ಬಲಪಡಿಸುವ ಅಗತ್ಯವಿದೆ. ನಮ್ಮ ರಾಷ್ಟ್ರವು ದೇಶೀಯ ಹೂಡಿಕೆದಾರರನ್ನು ಸದೃಢಗೊಳಿಸಿದರೆ ಎಂದಿಗೂ ಕುಸಿಯದ ಮತ್ತು ಬಲವಾದ ಆರ್ಥಿಕತೆ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಈ ಅಂಶಗಳತ್ತಲೂ ಗಂಭೀರವಾಗಿ ಗಮನಹರಿಸಬೇಕಾದ ಅವಶ್ಯಕತೆಯಿದೆ.

For All Latest Updates

ABOUT THE AUTHOR

...view details