ಭೋಪಾಲ್ (ಮಧ್ಯಪ್ರದೇಶ): ಈ ಹಿಂದೆ ಶಿವಪುರಿಯ ಕರೇರಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಗಿಲಾಲ್ ಜಾತವ್ ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ಬಿಎಸ್‌ಪಿ ನಾಯಕರು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಸೇರಿದ ಎರಡು ಡಜನ್‌ಗೂ ಹೆಚ್ಚು ಬಿಎಸ್‌ಪಿ ನಾಯಕರು - ಕಾಂಗ್ರೆಸ್ ಸೇರಿದ ಪ್ರಗಿ ಲಾಲ್ ಜಾತವ್
ಈ ಹಿಂದೆ ಶಿವಪುರಿಯ ಕರೇರಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಗಿಲಾಲ್ ಜಾತವ್ ಸೇರಿದಂತೆ ಬಹುಜನ ಸಮಾಜ ಪಕ್ಷದ ವಿವಿಧ ನಾಯಕರು ಭಾನುವಾರ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಬಿಎಸ್‌ಪಿ ನಾಯಕರು ಕಾಂಗ್ರೆಸ್ಗೆ ಸೇರ್ಪಡೆ
ಇನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ರನ್ನು ಭೇಟಿಯಾದ ನಂತರ ನಾಯಕರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದರು. ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಪ್ರಭಾವಿ ನಾಯಕ ಶುಕ್ಲಾ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಒಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನ ಅಲ್ಲಿನ ಜನ ಕುತೂಹಲದಿಂದ ನೋಡುತ್ತಿದ್ದಾರೆ.