ಅಗರ್ತಲಾ (ತ್ರಿಪುರ):ತ್ರಿಪುರದಲ್ಲಿ ಬಿಎಸ್ಎಫ್ನ 101 ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ.
ಇಂದು ತ್ರಿಪುರಾದಲ್ಲಿ 223 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆಯಾಗಿ 2,892ಕ್ಕೆ ಸೋಂಕಿತರ ಸಂಖ್ಯೆ ತಲುಪಿದೆ ಎಂದು ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 1,114 ಸಕ್ರಿಯ ಪ್ರಕರಣಗಳಿದ್ದು, 1,759 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಐದು ಜನರು ಸಾವನ್ನಪ್ಪಿದ್ದಾರೆ. ಹೊಸ ಪ್ರಕರಣದಲ್ಲಿ ವಲಸೆ ಬಂದ ಆರು ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಪ್ರತಿಯೊಬ್ಬರ ಆರೋಗ್ಯ ಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ನಾವು ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ನಮ್ಮಲ್ಲಿ ಸಾಕಷ್ಟು ವೈದ್ಯಕೀಯ ಮೂಲ ಸೌಕರ್ಯಗಳಿವೆ ಎಂದು ತ್ರಿಪುರಾ ಸಿಎಂ ಟ್ವೀಟ್ ಮಾಡಿದ್ದಾರೆ.
ಇನ್ನು ಸಲ್ಬಗನ್‌ನಲ್ಲಿರುವ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಹೊಸದಾಗಿ ಪತ್ತೆಯಾದ ಸೋಂಕಿತ ಎಲ್ಲಾ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಎಸ್‌ಎಫ್ ತಿಳಿಸಿದೆ. ನಮ್ಮ ಆಸ್ಪತ್ರೆಯು ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜುಗೊಂಡಿದೆ. ನಮಗೆ ಎಲ್ಲಾ ಸೌಲಭ್ಯಗಳಿವೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.