ನವದೆಹಲಿ: ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯಲ್ಲಿ ಸೋಮವಾರ ನಡೆದ ಬೋರ್ಡ್ ಪರೀಕ್ಷೆಗಳಲ್ಲಿ ಶೇ 98 ರಷ್ಟು ಹಾಜರಾತಿ ದಾಖಲಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.
ಸಿಬಿಎಸ್‌ಇ ಪರೀಕ್ಷೆ: ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯಲ್ಲಿ 98% ಹಾಜರಾತಿ ದಾಖಲು - CBSE exam
ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯಲ್ಲಿ ನಡೆದ 10 ಮತ್ತು 12 ನೇ ತರಗತಿಯ ಸಿಬಿಎಸ್‌ಇ ಮಂಡಳಿಯ ಪರೀಕ್ಷೆಗಳಲ್ಲಿ ಸುಮಾರು 98 ಪ್ರತಿಶತ ಹಾಜರಾತಿ ದಾಖಲಾಗಿದೆ.
12 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಸೋಮವಾರ ಭೌತಶಾಸ್ತ್ರ ಮತ್ತು ಸಂಗೀತ ಪತ್ರಿಕೆಗಳ ಪರೀಕ್ಷೆ ಎದುರಿಸಿದರು. 12 ನೇ ತರಗತಿ ಪರೀಕ್ಷೆಗೆ ಒಟ್ಟು 2,888 ವಿದ್ಯಾರ್ಥಿಗಳು ಹಾಜರಾಗಬೇಕಿದ್ದು, ಇದರಲ್ಲಿ 2,837 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, 98.2 ಶೇ ಹಾಜರಾತಿ ದಾಖಲಿಸಿದ್ದಾರೆ ಎಂದು ಸಿಬಿಎಸ್‌ಇ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪರೀಕ್ಷೆ ವಿಳಂಬವು ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅವಕಾಶಗಳಿಗೆ ಅಡ್ಡಿಯಾಗಬಹುದು. ಆದರೂ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹೊಸದಾಗಿ ಪರೀಕ್ಷೆಗಳನ್ನು ನಡೆಸಲು ಸಿದ್ಧರಿರುವುದಾಗಿ ಬೋರ್ಡ್ ತಿಳಿಸಿದೆ.
TAGGED:
CBSE exam