ಜಮ್ಮು: ಕಳೆದ ಏಳು ದಿನಗಳಲ್ಲಿ 95,000 ಕ್ಕೂ ಹೆಚ್ಚಿನ ಯಾತ್ರಿಕರು ಅಮರನಾಥನ ದರ್ಶನಕ್ಕೆ ಆಗಮಿಸಿದ್ದಾರೆ. ಆದರೆ, ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ಕಾರಣಕ್ಕೆ ಸೋಮವಾರ ಯಾವುದೇ ಹೊಸ ಯಾತ್ರಾರ್ಥಿಗಳನ್ನು ಇಲ್ಲಿಂದ ಹೊರಡಲು ಅನುಮತಿ ನೀಡಿಲ್ಲ.
ಉಗ್ರ ಬುರ್ಹಾನ್ ವಾನಿ ಸತ್ತು 3 ವರ್ಷ: ಭದ್ರತಾ ಕಾರಣಕ್ಕೆ ಅಮರನಾಥ ಯಾತ್ರೆ ಸ್ಥಗಿತ - undefined
ಕಳೆದ ಸೋಮವಾರ ಅಮರನಾಥ ಯಾತ್ರೆ ಆರಂಭಗೊಂಡಿದ್ದು ಈ ಒಂದು ವಾರದಲ್ಲಿ 95,000ಕ್ಕೂ ಅಧಿಕ ಯಾತ್ರಿಕರು ಅಮರನಾಥ ಪವಿತ್ರ ಗುಹೆಗೆ ಭೇಟಿ ನೀಡಿ ಅಮರನಾಥನ ದರ್ಶನ ಪಡೆದಿದ್ದಾರೆ.
![ಉಗ್ರ ಬುರ್ಹಾನ್ ವಾನಿ ಸತ್ತು 3 ವರ್ಷ: ಭದ್ರತಾ ಕಾರಣಕ್ಕೆ ಅಮರನಾಥ ಯಾತ್ರೆ ಸ್ಥಗಿತ](https://etvbharatimages.akamaized.net/etvbharat/prod-images/768-512-3782690-thumbnail-3x2-jnk.jpg)
ಇಂದಿಗೆ ಉಗ್ರ,ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿಮೃತಪಟ್ಟು ಮೂರು ವರ್ಷಗಳಾಗಿದ್ದು,ಈ ಹಿನ್ನೆಲೆ ಪ್ರತ್ಯೇಕತವಾದಿಗಳು ಆತನ ಮೂರನೇ ವರ್ಷದ ಪುಣ್ಯತಿಥಿ ಆಚರಿಸುತ್ತಿದ್ದು, ಈ ಕಾರಣಕ್ಕೆ ಕಾಶ್ಮೀರ ಕಣಿವೆ ಬಂದ್ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಅಮರನಾಥ ಯಾತ್ರೆ ಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.
ಜುಲೈ 1 ರಂದು ಅಮರನಾಥ ಯಾತ್ರೆ ಪ್ರಾರಂಭವಾದಾಗಿದ್ದು, 95,923 ಯಾತ್ರಿಗಳು ಈಗಾಗಲೇ ಪವಿತ್ರ ಗುಹೆಗೆ ಭೇಟಿ ನೀಡಿದ್ದಾರೆ. 45 ದಿನಗಳ ಕಾಲ ನಡೆಯುವ ಈ ಪ್ರಯಾಣವು ಆಗಸ್ಟ್ 15 ರಂದು ಶ್ರಾವಣ ಪೂರ್ಣಿಮೆಯೊಂದಿಗೆ ಕೊನೆಗೊಳ್ಳಲಿದೆ. ಈ ಪವಿತ್ರ ಗುಹೆ, ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಒಂದು ದಿನದ ಮಟ್ಟಿಗೆ ಮಾತ್ರ ಯಾತ್ರೆ ಸ್ಥಗಿತಗೊಂಡಿದ್ದು, ಮಂಗಳವಾರದಿಂದ ಯಥಾಸ್ಥಿತಿಯಂತೆ ಯಾತ್ರೆ ಮುಂದುವರೆಯಲಿದೆ.