ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಡೆಹ್ರಾಡೂನ್‌ನ ಮಹಾರಾನಾ ಪ್ರತಾಪ್ ಕ್ರೀಡಾ ಕಾಲೇಜಿನಲ್ಲಿರುವ ನಿರಾಶ್ರಿತರ ಶಿಬಿರದಿಂದ 900 ಬೆಡ್‌ಶೀಟ್‌ಗಳನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.
ಮಹಾರಾಣಾ ಪ್ರತಾಪ್ ಕ್ರೀಡಾ ಕಾಲೇಜಿನ ನಿರಾಶ್ರಿತರ ಕೇಂದ್ರದಿಂದ ಬೆಡ್‌ಶೀಟ್‌ಗಳನ್ನು ಕಳವು ಮಾಡಲಾಗಿದೆ ಎಂಬ ವರದಿಗಳಿವೆ. ನಾವು ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ನೀಡಿರುವ ವಸ್ತುಗಳನ್ನು ಕದಿಯದಂತೆ ನಾನು ಜನರನ್ನು ವಿನಂತಿಸುತ್ತೇನೆ ಎಂದು ಜಿಲ್ಲಾಧಿಕಾರಿ ಆಶಿಶ್ ಶ್ರೀವಾಸ್ತವ ಹೇಳಿದರು.
ಜಿಲ್ಲಾಧಿಕಾರಿ ಆಶಿಶ್ ಶ್ರೀವಾಸ್ತವ ಹೇಳಿಕೆ ಒದಗಿಸಿರುವ ಸೌಲಭ್ಯಗಳ ವಸ್ತುಗಳನ್ನು ಕದಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀವಾಸ್ತವ ಎಚ್ಚರಿಸಿದ್ದಾರೆ.
ರಾಜ್ಯದ ಕೆಲ ಕ್ವಾರಂಟೈನ್ ಕೇಂದ್ರಗಳಲ್ಲಿ ಕಳಪೆ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀವಾಸ್ತವ, ಕೆಲವು ಕ್ವಾರಂಟೈನ್ ಕೇಂದ್ರಗಳಿಂದ ಈ ರೀತಿಯ ಆರೋಪ ಕೇಳಿಬಂದಿದೆ. ಇದನ್ನು ನಾವು ಪರಿಶೀಲಿಸುತ್ತಿದ್ದೇವೆ. ಕೆಲವು ಕ್ಷುಲ್ಲಕ ಕಾರಣಗಳಿಗೆ ಇಂತಹ ಆರೋಪಗಳನ್ನು ಮಾಡಿರುವುದಾಗಿಯೂ ತಿಳಿದು ಬಂದಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಪರಿಸ್ಥಿತಿಯನ್ನ ಸುಧಾರಿಸಲಾಗುವುದು ಎಂದು ಇದೇ ವೇಳೆ ಶ್ರೀವಾಸ್ತವ್ ಭರವಸೆಯನ್ನೂ ನೀಡಿದ್ದಾರೆ.