ಕರ್ನಾಟಕ

karnataka

ETV Bharat / bharat

BSNL​ ಸ್ವಯಂ ನಿವೃತ್ತಿ ಯೋಜನೆ... ಒಂದೇ ವಾರದಲ್ಲಿ 70 ಸಾವಿರ ಸಿಬ್ಬಂದಿ ಅರ್ಜಿ!

ಈಗಾಗಲೇ ನಷ್ಟದಲ್ಲಿರುವ ಬಿಎಸ್​ಎನ್​ಎಲ್​​ ನೌಕರರ ವೇತನವನ್ನೂ ಸರಿಯಾಗಿ ನೀಡಲು ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ 70 ಸಾವಿರ ಸಿಬ್ಬಂದಿಗಳು ಸ್ವಯಂ ನಿವೃತ್ತಿ(ವಿಆರ್ ಎಸ್) ಪಡೆಯಲು ಮುಂದಾಗಿದ್ದಾರೆ.

ಬಿಎಸ್​ಎನ್​ಎಲ್​

By

Published : Nov 12, 2019, 7:32 PM IST

Updated : Nov 12, 2019, 7:47 PM IST

ಮುಂಬೈ:ವಿವಿಧ ಟೆಲಿಕಾಂ ಕಂಪನಿಗಳೊಂದಿಗೆ ದರ ಸಮರದಲ್ಲಿ ಹಿಂದೆ ಬಿದ್ದು ಅಪಾರ ನಷ್ಟಕ್ಕೊಳಗಾಗಿರುವ ಭಾರತೀಯ ಸಂಚಾರಿ ನಿಗಮ (ಬಿಎಸ್​ಎನ್​ಎಲ್​​) ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತೆ (ವಿಆರ್​ಎಸ್​) ಸೂಚಿಸಿದೆ.

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಿಎಸ್​ಎನ್​​ಎಲ್ ಒಂದೇ ವಾರದಲ್ಲಿ 70 ಸಾವಿರ ಸಿಬ್ಬಂದಿ ಈ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ​ಬಿಎಸ್​​ಎನ್​ಎಲ್​​ನಲ್ಲಿ ಖಾಯಂಗೊಂಡಿರುವ ಸಿಬ್ಬಂದಿಯ ಸಂಬಳ ಒಂದು ತಿಂಗಳ ತಡವಾದರೆ, ಒಪ್ಪಂದದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಕಳೆದ 8 ತಿಂಗಳಿಂದ ಯಾವುದೇ ರೀತಿಯ ಸಂಬಳ ನೀಡಿಲ್ಲ. ಹೀಗಾಗಿ ಒಟ್ಟು 70 ಸಾವಿರ ಕೆಲಸಗಾರರು ಸ್ವಯಂ ನಿವೃತ್ತಿ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಮಹತ್ವದ ವಿಷಯ ಹೊರಬಿದ್ದಿದೆ. ಬಿಎಸ್​ಎನ್​ಎಲ್​​ ಒಟ್ಟಾರೆಯಾಗಿ 77 ಸಾವಿರ ಉದ್ಯೋಗಿಗಳಿಂದ VRS ಪಡೆಯಬೇಕೆಂದು ಗುರಿ ಹಾಕಿಕೊಂಡಿತ್ತು. ಇದರಿಂದ ಬಿಎಸ್​ಎನ್​​ಎಲ್​ಗೆ ವರ್ಷಕ್ಕೆ ಏಳು ಸಾವಿರ ಕೋಟಿ ಉಳಿತಾಯದ ಯೋಜನೆ ಇದಾಗಿದೆ.

ಈಗಾಗಲೇ ನಷ್ಟದಲ್ಲಿರುವ ಬಿಎಸ್​ಎನ್​ಎಲ್​​ ನೌಕರರ ವೇತನವನ್ನೂ ಸರಿಯಾಗಿ ನೀಡಲು ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ 70 ಸಾವಿರ ಸಿಬ್ಬಂದಿಗಳು ಸ್ವಯಂ ನಿವೃತ್ತಿ(ವಿಆರ್ ಎಸ್) ಪಡೆಯಲು ಮುಂದಾಗಿದ್ದಾರೆ. 50 ವರ್ಷ ವಯಸ್ಸು ದಾಟಿದ ನೌಕರರು ವಿಆರ್‌ಎಸ್‌ಗೆ ಅರ್ಹರು ಎಂದು ಬಿಎಸ್‌ಎನ್‌ಎಲ್ ವಿಆರ್‌ಎಸ್ ಯೋಜನೆ- 2019 ಯಲ್ಲಿ ಹೇಳಿದೆ.

ಲಾಭದಾಯಕ ಸಂಸ್ಥೆ ಆಗಿಸಲು ಕೇಂದ್ರದ ಪ್ಲಾನ್​ ಏನು?

ಡಿಒಟಿ ಬಿಎಸ್​​ಎನ್​ಎಲ್​ ಪುನರುಜ್ಜೀವನ ಯೋಜನೆಗೆ 76,000 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಇದೇ ಸಾಲಿನಲ್ಲಿ ವಿಂಗಡನೆ ಮಾಡಿದರೆ ಕಂಪನಿಯ ವೆಚ್ಚ 95,000 ಕೋಟಿ ರೂ.ಗಿಂತ ಕಡಿಮೆ ಆಗಲಿದೆ. ಸ್ವಯಂ ನಿವೃತ್ತಿ ಯೋಜನೆ (ವಿಆರ್​​ಎಸ್​) ಅಡಿಯಲ್ಲಿ ಬಿಎಸ್​ಎನ್​ಎಲ್​ನ 1.76 ಲಕ್ಷ ಉದ್ಯೋಗಿಗಳಿಗೆ ₹ 29,000 ಕೋಟಿ, 4ಜಿ ಸ್ಪೆಕ್ಟ್ರಮ್​ಗೆ ₹ 20,000 ಕೋಟಿ ಹಾಗೂ ₹13,000 ಕೋಟಿ, 4ಜಿ ಸೇವೆಗಳ ಕ್ಯಾಪೆಕ್ಸ್​​ಗೆ ಹಣ ಒದಗಿಸಬೇಕಾಗುತ್ತದೆ. ಈ ಪ್ಯಾಕೇಜ್​ ಬಂದರೇ 2024ರ ಆರ್ಥಿಕ ವರ್ಷದ ವೇಳೆಗೆ ಬಿಎಸ್​ಎನ್​ಎಲ್​ ಲಾಭದಾಯಕ ಹಾದಿಗೆ ಮರಳಬಹುದು ಎಂದು ಅಂದಾಜಿಸಲಾಗಿದೆ.

ವಿಆರ್​ಎಸ್​ ಕೊಡಲು ಕೇಂದ್ರ ನಿರ್ಧರಿಸಿದ್ದೇಕೆ?

ಕಳೆದ ಅಕ್ಟೋಬರ್​ 23ರಂದು ಕೇಂದ್ರ ಟೆಲಿಕಾಂ ಇಂಡಸ್ಟ್ರಿ ಸಚಿವ ರವಿಶಂಕರ್​ ಪ್ರಸಾದ್​, ಸುದ್ದಿಗೋಷ್ಠಿ ನಡೆಸಿ ಈ ವಿಷಯ ಹೊರಹಾಕಿದ್ದರು. ಇದೀಗ ಸುಮಾರು 70 ಸಾವಿರ ಸಿಬ್ಬಂದಿ ವಿಆರ್​ಎಸ್​ಗೆ ಅರ್ಜಿ ಹಾಕಿದ್ದಾರೆ ಎಂದು ಬಿಎಸ್​ಎನ್​ಎಲ್​ ಎಂಡಿ ಪಿಕೆ ಪುರವರ್ ತಿಳಿಸಿದ್ದಾರೆ. ​​1.76 ಲಕ್ಷ ನೌಕರರು ಬಿಎಸ್​ಎನ್​ಎಲ್​ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದರಲ್ಲಿ 1 ಲಕ್ಷಕ್ಕೂ ಅಧಿಕ ಸಿಬ್ಬಂದಿ 50+ ವಯಸ್ಸಿನವರು ಇದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದರು.

ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್​ ಸಂಸ್ಥೆ ಉದ್ಯೋಗಿಗಳಿಗೆ ನವೆಂಬರ್​ 4ರಿಂದಲೇ ಸ್ವಯಂ ನಿವೃತ್ತಿ ಪಡೆದುಕೊಳ್ಳುವ ಅವಕಾಶ ನೀಡಲಾಗಿದ್ದು, ಡಿಸೆಂಬರ್​​ 3ರೊಳಗೆ ಇದಕ್ಕೆ ಅರ್ಜಿ ಸಲ್ಲಿಕೆ ಮಾಡುವಂತೆ ತಿಳಿಸಲಾಗಿತ್ತು.

ಎಲ್ಲರಿಗೂ ಅಭಯ ನೀಡಿದ್ದ ಇಲಾಖೆ:

ಇದೇ ವೇಳೆ, ಹಣಕಾಸು ಸಚಿವರು ಬಿಎಸ್​ಎನ್​ಎಲ್​ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ. ಎಂಟಿಎನ್​ಎಲ್​ ಮತ್ತು ಬಿಎಸ್​ಎನ್​ಎಲ್​ ಮುಚ್ಚಲಾಗುತ್ತಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾದಂತಹವು ಎಂದು ಡಿಒಟಿ ಕಾರ್ಯದರ್ಶಿ ಅನ್ಶು ಪ್ರಕಾಶ್ ಸಹ ಸ್ಪಷ್ಟ ಪಡಿಸಿದ್ದರು. ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಬಿಎಸ್​​ಎನ್​ಎಲ್​ ಮುಚ್ಚಲಾಗುತ್ತಿದೆ ಎಂಬ ವರದಿಗಳಿಗೆ ಡಿಒಟಿ ಪೂರ್ಣ ವಿರಾಮ ಇಟ್ಟಿದೆ. ಇದರಿಂದ ಬಿಎಸ್​​ಎನ್​ಎಲ್​ನ 1.76 ಲಕ್ಷ ಉದ್ಯೋಗಿಗಳು ನಿರಾಳರಾಗಿದ್ದರು. ಈ ನಡುವೆ ಈಗ 70 ಸಾವಿರ ಉದ್ಯೋಗಿಗಳು ವಿಆರ್​ಎಸ್​ ಪಡೆಯಲು ಸನ್ನದ್ಧರಾಗಿರುವುದು ಸಂಸ್ಥೆಯ ಮರು ಚೇತನಕ್ಕೆ ಅನುವು ಮಾಡಿಕೊಟ್ಟಂತಾಗಿದೆ.

Last Updated : Nov 12, 2019, 7:47 PM IST

ABOUT THE AUTHOR

...view details