ದೆಹಲಿ:ಜನವರಿ 26 ರಂದು ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ದೆಹಲಿಯ ಮೂರು ಶಾಲೆಗಳು ಮತ್ತು ರಾಜಸ್ಥಾನದ ಉದಯಪುರ ಕೇಂದ್ರದ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ರಕ್ಷಣಾ ಸಚಿವಾಲಯ ಮತ್ತು ದೆಹಲಿ ಸರ್ಕಾರ, ವಿವಿಧ ಶಾಲೆಗಳಿಂದ 636 ಮಕ್ಕಳನ್ನು (474 ಬಾಲಕಿಯರು ಮತ್ತು 162 ಬಾಲಕರು) ಆಯ್ಕೆ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ದೆಹಲಿಯ ಮಾಡೆಲ್ ಟೌನ್‌ನ ಡಿಎವಿ ಸೆಂಟೆನರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು, ಉದಯಪುರದ ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರದ ಹೊರತಾಗಿ ಬಂಗಾಳಿ ಹಿರಿಯ ಮಾಧ್ಯಮಿಕ ಶಾಲೆ, ಸರೋಜಿನಿ ನಗರ, ಮತ್ತು ಜನಕ್‌ಪುರಿಯ ಸರ್ವೋದಯ ಕನ್ಯಾ ವಿದ್ಯಾಲಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.