ಜಮ್ಮು:ಜಮ್ಮು ಮತ್ತು ಕಾಶ್ಮೀರದಲ್ಲಿ 46,000ಕ್ಕೂ ಹೆಚ್ಚು ಜನರು ಕಣ್ಗಾವಲಿನಲ್ಲಿದ್ದಾರೆ. ಅದರಲ್ಲಿ 23 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 207ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ 23 ಹೊಸ ಪ್ರಕರಣಗಳಲ್ಲಿ 16 ಕಾಶ್ಮೀರ ಕಣಿವೆಯಿಂದ ಮತ್ತು ಏಳು ಪ್ರಕರಣ ಜಮ್ಮುವಿನಿಂದ ವರದಿಯಾಗಿವೆ. 207ರಲ್ಲಿ 168 ಕಾಶ್ಮೀರದಿಂದ ಮತ್ತು 39 ಜಮ್ಮುವಿನಿಂದ ವರದಿಯಾಗಿವೆ.
ಜಮ್ಮು-ಕಾಶ್ಮೀರದಲ್ಲೀಗ 207ಕ್ಕೆ ಏರಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ.. - ಕೊರೊನಾ ವೈರಸ್
ವರದಿ ಪ್ರಕಾರ ಧೂಮಪಾನ, ಸಿಗರೇಟ್, ಬೀಡಿ, ಹುಕ್ಕಾ ಇತ್ಯಾದಿ ಸೋಂಕಿನ ಸಾಧ್ಯತೆ ಹೆಚ್ಚಿಸುತ್ತದೆ. ಯಾಕೆಂದರೆ, ವೈರಸ್ ಕೈಗಳಿಂದ ಬಾಯಿಗೆ ಹರಡುವ ಸಾಧ್ಯತೆಗಳೇ ಹೆಚ್ಚು. ಅಲ್ಲದೇ ಧೂಮಪಾನವು ಶ್ವಾಸಕೋಶ, ಹೃದಯ ಮತ್ತು ದೇಹದ ಇತರ ಭಾಗಗಳನ್ನು ಹಾನಿಗೊಳಿಸುತ್ತದೆ ಎಂದು ಸಲಹೆಗಾರರು ತಿಳಿಸಿದ್ದಾರೆ.
ಕೊರೊನಾ ವೈರಸ್ ಕುರಿತ ದೈನಂದಿನ ಮಾಧ್ಯಮ ಬುಲೆಟಿನ್ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 7,726 ಜನರನ್ನು ಹೋಂ ಕ್ವಾರಂಟೈನ್, 415 ಮಂದಿಯನ್ನು ಆಸ್ಪತ್ರೆ ಕ್ವಾರಂಟೈನ್, 197 ಮಂದಿಯನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಹಾಗೂ 27,891 ಜನರನ್ನು ಮನೆ ಕಣ್ಗಾವಲಿನಲ್ಲಿರಿಸಲಾಗಿದೆ. 9,925 ಜನರು ತಮ್ಮ 28 ದಿನಗಳ ಕಣ್ಗಾವಲು ಅವಧಿ ಪೂರ್ಣಗೊಳಿಸಿದ್ದಾರೆ. ಒಟ್ಟು 46,154 ಜನ ಕೇಂದ್ರ ಪ್ರದೇಶದಲ್ಲಿ ಕಣ್ಗಾವಲಿನಲ್ಲಿದ್ದಾರೆ. ಈವರೆಗೆ ಪ್ರದೇಶದ 2,754 ಮಾದರಿ ಕೊರೊನಾ ನೆಗೆಟಿವ್ ಎಂದು ವರದಿ ಹೇಳುತ್ತದೆ.