ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಭೀತಿ ನಡುವೆ ಇಂದಿನಿಂದ ವಿಶೇಷ ರೈಲುಗಳು ದೇಶದಲ್ಲಿ ಪ್ರಯಾಣ ಆರಂಭಿಸಿವೆ. ದೇಶದ ಕೆಲವು ಆಯ್ದ ನಗರಗಳಿಗೆ ಸಂಜೆ 5 ಗಂಟೆಯಿಂದ ಜರ್ನಿ ಶುರುವಾಗಲಿದೆ. ಬರೋಬ್ಬರಿ ಒಂದೂವರೆ ತಿಂಗಳ ನಂತರ ಕೆಲವು ಬದಲಾವಣೆಗಳು, ಮಾರ್ಗಸೂಚಿಗಳು ಮೂಲಕ ರೈಲುಗಳ ಓಡಾಟ ನಡೆಯುತ್ತಿದೆ. ಇಲ್ಲಿ ಪ್ರಯಾಣಿಕರಿಗೆ ಗೊತ್ತಿರಲೇಬೇಕಾದ ಅಗತ್ಯ ಮಾಹಿತಿಗಳಿವೆ.
ಸಂಚಾರ ಮಾಡಲಿರುವ ಎಲ್ಲ 15 ರೈಲುಗಳು ಸಂಪೂರ್ಣವಾಗಿ ಹವಾ ನಿಯಂತ್ರಣದಿಂದ ಕೂಡಿದ್ದು, ಸೂಪರ್ ಫಾಸ್ಟ್ ರೈಲು ಸೇವೆ ಲಭ್ಯವಿದೆ. ನಿನ್ನೆ ಸಂಜೆ 06 ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ. ರೈಲ್ವೆ ಇಲಾಖೆ ಮಾಹಿತಿ ನೀಡಿರುವ ಪ್ರಕಾರ, ಈಗಾಗಲೇ 80 ಸಾವಿರ ಜನರು ಟಿಕೆಟ್ ಬುಕ್ ಮಾಡಿದ್ದು, ಇದರಿಂದ 16 ಕೋಟಿ ರೂ ಹಣ ಬಂದಿದೆ ಎಂದು ತಿಳಿಸಿದೆ.
ರೈಲ್ವೆ ಪ್ರಯಾಣಿಕರಿಗೆ ಸೂಚನೆಗಳು:
- ಇ-ಟಿಕೆಟ್ ಇದ್ದರೆ ಮಾತ್ರ ರೈಲು ನಿಲ್ದಾಣಕ್ಕೆ ಎಂಟ್ರಿ.
- ಪ್ರಯಾಣದ ವೇಳೆ ಸ್ಕ್ರೀನಿಂಗ್ ಕಡ್ಡಾಯ.
- ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
- ಸ್ಯಾನಿಟೈಸರ್ ಮನೆಯಿಂದಲೇ ತರಬೇಕು
- ಹೊದಿಕೆಯನ್ನೂ ಪ್ರಯಾಣಿಕರೇ ತರಬೇಕು.
- ರೈಲಿನಲ್ಲಿ ಪ್ಯಾಕೇಜ್ಡ್ ಆಹಾರ ಮಾತ್ರ ನೀಡಲಾಗುವುದು.
- ರೈಲು ನಿಲ್ದಾಣಗಳಿಗೆ 90 ನಿಮಿಷಗಳಿಗೂ ಮೊದಲೇ ತಲುಪಲು ಸೂಚನೆ.
- ಪ್ರತಿಯೊಬ್ಬ ಪ್ರಯಾಣಿಕನಿಗೂ ವೈದ್ಯಕೀಯ ತಪಾಸಣೆ.
- ಕೋವಿಡ್ ಲಕ್ಷಣ ಕಂಡು ಬಂದರೆ ಪ್ರಯಾಣಕ್ಕೆ ಅವಕಾಶವಿಲ್ಲ.
- ಆಹಾರ, ಅಗತ್ಯ ವಸ್ತುಗಳನ್ನು ಪ್ರಯಾಣಿಕರು ತೆಗೆದುಕೊಂಡು ಬರಬೇಕು.
- ಪ್ರಯಾಣ ರದ್ದು ಮಾಡಿಕೊಳ್ಳಲು 24 ಗಂಟೆಗೂ ಮೊದಲೇ ಅವಕಾಶ.
- ರೈಲು ನಿಲ್ದಾಣದಲ್ಲಿ ಬುಕ್ಕಿಂಗ್ ಕೌಂಟರ್ ಬಂದ್ ಆಗಿರುವ ಕಾರಣ ಫ್ಲಾಟ್ಫಾರ್ಮ್ ಟಿಕೆಟ್ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಈ ರೈಲುಗಳಲ್ಲಿ ಯಾವುದೇ ಸಾಮಾನ್ಯ ಬೋಗಿ ಇರುವುದಿಲ್ಲ.
- ನಿನ್ನೆ 6 ಗಂಟೆಯಿಂದ ಬುಕ್ಕಿಂಗ್ ಆರಂಭವಾಗಿದ್ದು, ಕೇವಲ ಅರ್ಧಗಂಟೆಯಲ್ಲಿ ಬರೋಬ್ಬರಿ 18 ಸಾವಿರ ಟಿಕೆಟ್ ಬುಕ್ಕಿಂಗ್
ರೈಲು ಸಂಚಾರ ಹೇಗೆ?:
ದೇಶದಲ್ಲಿ ಒಟ್ಟು 15 ರೈಲುಗಳು ಇಂದಿನಿಂದ ಓಡಾಟ ನಡೆಸಲಿದ್ದು ಪ್ರಮುಖವಾಗಿ ಮುಂಬೈ, ಬೆಂಗಳೂರು, ಚೆನ್ನೈ ಸೇರಿದಂತೆ 15 ನಗರಗಳಿಗೆ ಸಂಚರಿಸಲಿದೆ.