ಕರ್ನಾಟಕ

karnataka

ETV Bharat / bharat

ಪೊಲೀಸರ ಮಿಂಚಿನ ಕಾರ್ಯಾಚರಣೆ: ಮನೆಯೊಂದರಲ್ಲಿದ್ದ 435 ಕೆ.ಜಿ ಬ್ರೌನ್​ ಶುಗರ್ ವಶಕ್ಕೆ - ಮಣಿಪುರ ಪೊಲೀಸರಿಂದ ಬ್ರೌನ್ ಶುಗರ್ ಜಪ್ತಿ

ಮಣಿಪುರದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಮನೆಯೊಂದರ ಮೇಲೆ ದಾಳಿ ಮಾಡಿ ಸುಮಾರು 435 ಕೆ.ಜಿಗೂ ಹೆಚ್ಚು ಬ್ರೌನ್ ಶುಗರ್ ಅನ್ನು ವಶಪಡಿಸಿಕೊಂಡಿದ್ದಾರೆ.

brown sugar seized
ಬ್ರೌನ್​ ಶುಗರ್ ವಶಕ್ಕೆ

By

Published : Oct 30, 2020, 2:56 PM IST

ಇಂಫಾಲ್ (ಮಣಿಪುರ):ತೌಬಲ್ ಜಿಲ್ಲೆಯ ಮೌಜಿಂಗ್ ಪ್ರದೇಶದಮನೆಯೊಂದರ ಮೇಲೆದಾಳಿ ಮಾಡಿ ಸುಮಾರು 435 ಕೆ.ಜಿಗೂ ಹೆಚ್ಚು ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಮಾರು 16 ಪೊಟ್ಟಣಗಳಷ್ಟು ಬ್ರೌನ್ ಶುಗರ್ ಜೊತೆಗೆ ಹಲವು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತೌಬಲ್​ನ ಪೊಲೀಸ್ ವರಿಷ್ಠಾಧಿಕಾರಿ ಸರಂಗ್​ಥೆಮ್ ಇಬೊಂಚಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

435.94 ಕೆ.ಜಿ ಬ್ರೌನ್ ಶುಗರ್ ಜೊತೆಗೆ 438 ಲೀಟರ್​ಗಳಷ್ಟು ಮಾರ್ಫಿನೇಟೆಡ್​ ಲಿಕ್ವಿಡ್, 705 ಗ್ರಾಮ್ ಸುಣ್ಣ ಹಾಗೂ ಒಂದು ಲೀಟರ್ ಅಮೋನಿಯಂ ಕ್ಲೋರೈಡ್ ಅನ್ನು ಸಹ ಜಪ್ತಿ ಮಾಡಲಾಗಿದೆ. ಆರೋಪಿಗಳು ಬಳಸುತ್ತಿದ್ದ ಮೂರು ಎಲ್​ಪಿಜಿ ಸಿಲಿಂಡರ್​ಗಳು, ಒಂದು ಬೈಕ್, ಒಂದು ಆಟೋ ರಿಕ್ಷಾವನ್ನು ಕಾರ್ಯಾಚರಣೆ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ವಶಪಡಿಸಿಕೊಂಡ ಸಾಮಗ್ರಿಗಳ ಮಾರುಕಟ್ಟೆ ಮೌಲ್ಯವನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.

ಬ್ರೌನ್ ಶುಗರ್ ತಯಾರಿಸುತ್ತಿದ್ದ ಖಯಾಮುದ್ದೀನ್ ಹಾಗೂ ಆತನ ಪತ್ನಿ ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಸೆರೆಹಿಡಿಯಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details