ಕೊಲ್ಕತ್ತಾ (ಪಶ್ಚಿಮ ಬಂಗಾಳ): ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನರಿಗೆ ತಿಳಿಸಲು 3000ಕ್ಕೂ ಹೆಚ್ಚು ಬಾಂಗ್ಲಾ ಸಹಾಯಕ ಸಹಯೋಗ ಕೇಂದ್ರಗಳನ್ನು ತೆರೆದಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಳಿದರು.
ಸರ್ಕಾರದ ಯೋಜನೆಗಳನ್ನು ತಿಳಿಸಲು 3000 ಸಹಯೋಗ ಕೇಂದ್ರ ತೆರೆದ ಮಮತಾ ಬ್ಯಾನರ್ಜಿ - 3000 ಸಹಯೋಗ ಕೇಂದ್ರ ತೆರೆದ ಮಮತಾ ಬ್ಯಾನರ್ಜಿ
ಸರ್ಕಾರಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು 3,000 ಕ್ಕೂ ಹೆಚ್ಚು ಬಾಂಗ್ಲಾ ಸಹಾಯಕ / ಸಹಯೋಗ ಕೇಂದ್ರಗಳನ್ನು (ಬಿಎಸ್ಕೆ) ಪ್ರಾರಂಭಿಸಲಾಗಿದೆ ಮತ್ತು ಕೇಂದ್ರಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 3437 ಬಾಂಗ್ಲಾ ಸಹಾಯಕ ಸಹಯೋಗ (ಬಿಎಸ್ಕೆ) ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳ ಕಾರ್ಯವೈಖರಿಯನ್ನು ಉತ್ತಮ ರೀತಿಯಲ್ಲಿ ನಡೆಸುವಲ್ಲಿ ಕಾರ್ಯಪ್ರವೃತ್ತರಾಗಿ ಜನರಿಗೆ ಸರ್ಕಾರದ ಸಕಲ ಯೋಜನೆಗಳು ತಲುಪುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.
ನಂತರ ಕೊರೊನಾ ಬಗ್ಗೆ ಮಾಹಿತಿ ನೀಡಿ ರಾಜ್ಯದಲ್ಲಿ ದುರ್ಗಾ ಪೂಜೆಯ ನಂತರ ಶೇ.8.23ರಷ್ಟು ಸೋಂಕಿತರ ಸಂಖ್ಯೆ ಇದೆ ಎಂದು ತಿಳಿಸಿದರು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ರಾಜ್ಯದಲ್ಲಿ 36,246 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 3,46,262 ಜನ ಗುಣಮುಖರಾಗಿದ್ದು 7,068 ಸಾವುಗಳು ಸಂಭವಿಸಿವೆ.