ನವದೆಹಲಿ/ಗಾಂಧಿನಗರ:ಒಂದು ವರ್ಷದೊಳಗೆ ಗುಜರಾತ್ನ ಸರ್ದಾರ್ ವಲ್ಲಭಭಾಯಿ ಪಾಟೇಲ್ ಅವರ ಉಕ್ಕಿನ ಪ್ರತಿಮೆಯನ್ನು ಸುಮಾರು 26 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವೀಕ್ಷಿಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಒಂದೇ ವರ್ಷದಲ್ಲಿ 'ಏಕತಾ ಪ್ರತಿಮೆ'ಗೆ 26 ಲಕ್ಷ ಪ್ರವಾಸಿಗರ ಭೇಟಿ: ಮೋದಿ - ಏಕತಾ ಪ್ರತಿಮೆ ಲೇಟೆಸ್ಟ್ ಸುದ್ದಿ
ಲೋಕಾರ್ಪಣೆಗೊಂಡ ಒಂದೇ ವರ್ಷದೊಳಗೆ ಜಗತ್ತಿನ ಅತಿ ಎತ್ತರದ ಪ್ರತಿಮೆಯಾದ ಗುಜರಾತ್ನಲ್ಲಿರುವ 'ಏಕತಾ ಪ್ರತಿಮೆ'ಯನ್ನು ಸುಮಾರು 26 ಲಕ್ಷ ಜನರು ವೀಕ್ಷಿಸಿದ್ದಾರಂತೆ.
'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪಿಸಿದ ನಮೋ, ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆ ಭಾರತೀಯರ ಹೆಮ್ಮೆ. 2018ರ ಅಕ್ಟೋಬರ್ 31ರಂದು ಈ ಏಕತಾ ಪ್ರತಿಮೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲಾಗಿದೆ. ಅಮೆರಿಕಾದ ಸ್ವಾತಂತ್ರ್ಯ ದೇವತೆಯ ಪ್ರತಿಮೆ(ಸ್ಟ್ಯಾಚ್ಯೂ ಆಫ್ ಲಿಬರ್ಟಿ)ಗಿಂತ ದುಪ್ಪಟ್ಟು ಎತ್ತರವಿರುವ ಈ ಪ್ರತಿಮೆಯನ್ನು ಅನಾವರಣಗೊಳಿಸಿ, ಒಂದು ವರ್ಷ ಪೂರೈಸುವ ಮುನ್ನ 26 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ ಎಂದು ಮೋದಿ ಮಾಹಿತಿ ಕೊಟ್ಟಿದ್ದಾರೆ.
ಈ ಏಕತಾ ಪ್ರತಿಮೆ ಭಾರತ ಸೇರಿದಂತೆ ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಮಹತ್ವದ ಸಂಶೋಧನೆಯ ವಿಷಯವಾಗಬಹುದು ಎಂದು ಮೋದಿ ಹೇಳಿದ್ರು.