ಕರ್ನಾಟಕ

karnataka

ಮದ್ದು ಕೊಡುವ ವೈದ್ಯರನ್ನು ಬಿಡದ ಮಹಾಮಾರಿ... ಕೊರೊನಾಗೆ 201 ವೈದ್ಯರು ಬಲಿ!

ಮದ್ದು ಕೊಡುವ ವೈದ್ಯರನ್ನು ಬಿಡದ ಮಹಾಮಾರಿ... ಕೊರೊನಾಗೆ 201 ವೈದ್ಯರು ಬಲಿ!

By

Published : Aug 9, 2020, 4:27 PM IST

Published : Aug 9, 2020, 4:27 PM IST

ಕೊರೊನಾಗೆ 201 ವೈದ್ಯರು ಬಲಿ
ಕೊರೊನಾಗೆ 201 ವೈದ್ಯರು ಬಲಿ

ನವದೆಹಲಿ: ತಮ್ಮ ಜೀವನ ಪಣಕ್ಕಿಟ್ಟು ಜನರ ಸೇವೆ ಮಾಡುತ್ತಿದ್ದ 201 ವೈದ್ಯರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಈವರೆಗೆ 201 ವೈದ್ಯರು ಕೊರೊನಾದಿಂದ ಸಾವನ್ನಪ್ಪಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗಮನಹರಿಸಬೇಕಿದೆ ಎಂದು ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಮನವಿ ಮಾಡಿದೆ.

ಈ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ಐಎಂಎ, ಕೊರೊನಾ ವಾರಿಯರ್ಸ್​ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ ಕುಟುಂಬಸ್ಥರಿಗೆ ಸೂಕ್ತ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಜೀವ ವಿಮಾ ಸೌಲಭ್ಯ ನೀಡಬೇಕು ಎಂದು ಕೇಳಿಕೊಂಡಿದೆ.

ವೈದ್ಯರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಐಎಂಎ, ದಿನದಿಂದ ದಿನಕ್ಕೆ ವೈದ್ಯರೂ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಏಕೆಂದ್ರೆ ಸಾವಿರಾರು ಜನ ರೋಗಿಗಳು ವೈದ್ಯರನ್ನು ಅವಲಂಬಿಸಿದ್ದಾರೆ. ಐಎಂಎ ಪತ್ರ ಬರೆದಿದೆ.

ಇನ್ನು ತಮಿಳುನಾಡಿನಲ್ಲಿ ಕೊರೊನಾ ಹೆಚ್ಚು (46) ವೈದ್ಯರು ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 23 ಹಾಗೂ ಗುಜರಾತ್​ನಲ್ಲಿ 23 ವೈದ್ಯರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 17,064 ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಐಎಂಎ ಮುಖ್ಯ ಕಾರ್ಯದರ್ಶಿ ಡಾ.ಆರ್.ವಿ.ಅಶೋಕನ್ ತಿಳಿಸಿದ್ದಾರೆ.

ABOUT THE AUTHOR

...view details