ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮೇ 7ರಂದು ಕೇಂದ್ರ ಸರ್ಕಾರ ಪ್ರಾರಂಭಿಸಿದ 'ವಂದೇ ಭಾರತ್' ಮಿಷನ್ ಮೂಲಕ 20 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಂದೇ ಭಾರತ್ ಮಿಷನ್: 20 ಲಕ್ಷಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಆಗಮನ - ಸ್ವದೇಶಕ್ಕೆ ಬರಳಿದ 20 ಲಕ್ಷ ಭಾರತೀಯರು
ಮೇ 7ರಂದು ಕೇಂದ್ರ ಸರ್ಕಾರ ಪ್ರಾರಂಭಿಸಿದ 'ವಂದೇ ಭಾರತ್' ಮಿಷನ್ ಮೂಲಕ 20 ಲಕ್ಷಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ 1ರಿಂದ ಕಾರ್ಯನಿರ್ವಹಿಸುತ್ತಿರುವ ಈ ಕಾರ್ಯಾಚರಣೆಯ ಏಳನೇ ಹಂತದ ಅಡಿಯಲ್ಲಿ, ಈ ತಿಂಗಳ ಅಂತ್ಯದ ವೇಳೆಗೆ 1,057 ಅಂತಾರಾಷ್ಟ್ರೀಯ ವಿಮಾನಗಳು 24 ರಾಷ್ಟ್ರಗಳಿಂದ ಭಾರತದಾದ್ಯಂತ 22 ವಿಮಾನ ನಿಲ್ದಾಣಗಳನ್ನು ತಲುಪಿ ಅಂದಾಜು 1 ಲಕ್ಷದ 95 ಸಾವಿರ ಜನರು ವಿದೇಶದಿಂದ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ವಂದೇ ಭಾರತ್ ಮಿಷನ್‌ನ ವಿವಿಧ ವಿಧಾನಗಳ ಮೂಲಕ 20.55 ಲಕ್ಷ ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ. ಏರ್ ಇಂಡಿಯಾ, ಖಾಸಗಿ ಮತ್ತು ವಿದೇಶಿ ವಿಮಾನಗಳು, ಚಾರ್ಟರ್ಡ್ ವಿಮಾನಗಳು, ನೌಕಾ ಹಡಗುಗಳು ಮತ್ತು ಭೂ ಗಡಿ ಮೂಲಕ ಭಾರತೀಯರು ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.