ನವದೆಹಲಿ:ಕಳೆದ 24 ಗಂಟೆಗಳಲ್ಲಿ 10,386 ರೋಗಿಗಳು ಕೋವಿಡ್-19 ನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಚೇತರಿಸಿಕೊಂಡ ರೋಗಿಗಳ ಸಂಖ್ಯೆ 2 ಲಕ್ಷ ತಲುಪಿದ್ದು, ಗುಣಮುಖ ಪ್ರಮಾಣವು 53.79ಕ್ಕೆ ಏರಿಕೆಯಾಗಿದೆ.
ದಿನದಿತ್ಯ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಚೇತರಿಕೆ ಮತ್ತು ಸಕ್ರಿಯ ಪ್ರಕರಣಗಳ ನಡುವೆ ಅಂತರ ಹೆಚ್ಚುತ್ತಿರುವುದನ್ನು ಕಾಣಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಗುಣಮುಖರಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕೋವಿಡ್-19 ಅನ್ನು ಸಮಯೋಚಿತವಾಗಿ ನಿರ್ವಹಿಸುವ ಭಾರತದ ಕಾರ್ಯತಂತ್ರದ ಪ್ರದರ್ಶನವಾಗಿದೆ ಎಂದು ಹೇಳಿದೆ.
ಸರ್ಕಾರಿ ಲ್ಯಾಬ್‌ಗಳ ಸಂಖ್ಯೆ 703 ಮತ್ತು ಖಾಸಗಿ ಲ್ಯಾಬ್‌ಗಳು 257ಕ್ಕೆ ಏರಿದ್ದು ದೇಶದ ಒಟ್ಟು ಲ್ಯಾಬ್‌ಗಳ ಸಂಖ್ಯೆ 960ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,76,959 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 64,26,627 ಎಂದು ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 13,586 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 3,80,532 ತಲುಪಿದೆ.