ಶ್ರೀನಗರ:ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಗೃಹ ಸಚಿವಾಲಯ ನೀಡಿದ (ಎಂಹೆಚ್ಎ) ಮಾರ್ಗಸೂಚಿಗಳಿಗೆ ಅನುಸಾರವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 1000ಕ್ಕೂ ಹೆಚ್ಚು ಆಟಗಾರರು ಸೀಮಿತ ಕ್ರೀಡಾ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.
ಮುಂಬರುವ ದೇಶೀಯ ಪಂದ್ಯಾವಳಿಗಳಾದ ಜಿಲ್ಲಾ, ವಿಭಾಗೀಯ ಮಟ್ಟ, ರಾಜ್ಯ ಚಾಂಪಿಯನ್‌ಶಿಪ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಪ್ರೀಮಿಯರ್ ಲೀಗ್ಗಾಗಿ ರಾಜ್ಯ ಸದಸ್ಯ ಘಟಕದ ಹಾಕಿ ಆಟಗಾರರು ಮತ್ತು ತರಬೇತುದಾರರು ಪೂರ್ವ ತಯಾರಿ ನಡೆಸಿದ್ದಾರೆ.
ಗರಿಗೆದರಿದ ಸೀಮಿತ ಕ್ರೀಡಾ ಚಟುವಟಿಕೆ ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಹಾಕಿ ಚಟುವಟಿಕೆಗಳನ್ನು ಪುನಾರಂಭಿಸಿದವರಲ್ಲಿ ನಾವೇ ಮೊದಲಿಗರು. ರಾಜ್ಯದಲ್ಲಿ ಗೃಹ ಸಚಿವಾಲಯದ (ಎಂಹೆಚ್ಎ) ಮಾರ್ಗಸೂಚಿಗಳಿಗೆ ಅನುಸಾರವಾಗಿ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಪುನಾರಂಭಿಸಲಾಗಿದೆ.
ಕೋವಿಡ್-19 ಮಾರ್ಗಸೂಚಿ ಮತ್ತು ಕೊರೊನಾ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಶಿಬಿರಗಳನ್ನು ನಡೆಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಯಾದ್ಯಂತ ಮೈದಾನಕ್ಕೆ ಮರಳುವಂತೆ ಸಾಕಷ್ಟು ಆಟಗಾರರನ್ನು ಸಹ ಪ್ರೋತ್ಸಾಹಿಸಿದ್ದೇವೆ. ನಮ್ಮ ಈ ಪ್ರತಿಕ್ರಿಗೆ 1000ಕ್ಕೂ ಹೆಚ್ಚು ಆಟಗಾರರು ಹಾಕಿ ಕ್ರೀಡಾಂಗಣಕ್ಕೆ ಇಳಿದಿದ್ದಾರೆ.
ಮುಂಬರುವ ದೇಶೀಯ ಪಂದ್ಯಾವಳಿಗಾಗಿ ತಯಾರಿ ನಡೆಸಲಾಗುತ್ತದೆ ಎಂದಿರುವ ಜಮ್ಮು ಮತ್ತು ಕಾಶ್ಮೀರದ ಹಾಕಿ ತಂಡದ ಪ್ರಧಾನ ಕಾರ್ಯದರ್ಶಿ ಡಾ.ತರಣ್ ಸಿಂಗ್, ಕ್ರೀಡಾಪಟುಗಳು ತಮ್ಮ ನೆಚ್ಚಿನ ಆಟದೊಂದಿಗೆ ಸಂಪರ್ಕದಲ್ಲಿರುವುದು ಬಹಳ ಮುಖ್ಯ. ಆದ್ದರಿಂದ ನಮ್ಮ ರಾಜ್ಯದಲ್ಲಿ ನಿಧಾನವಾಗಿ ಮತ್ತು ಸ್ಥಿರವಾಗಿ ಕ್ರೀಡಾ ಚಟುವಟಿಕೆಗಳನ್ನು ಪ್ರಾರಂಭಿಸಲು ಅವಕಾಶ ದೊರೆತಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.