ಚೆನೈ: ಕೊರೊನಾ ಹಾವಳಿ ದಿನೇ ದಿನೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಈ ಲಾಕ್‌ಡೌನ್ ಆದೇಶ ಹೊರಡಿಸಿ 8 ದಿನ ಕಳೆದಿದ್ದು, ಇನ್ನೂ ಸಹ ಪುಂಡ ಪೋಕರಿಗಳು ರಸ್ತೆಗಿಳಿಯುವುದನ್ನು ಕಡಿಮೆ ಮಾಡಿಲ್ಲ. ಹೀಗಾಗಿ ತಮಿಳುನಾಡು ಪೊಲೀಸರು ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 1,252 ಜನರನ್ನು ಬಂಧಿಸಿದ್ದಾರೆ.
ಲಾಕ್‌ಡೌನ್ ನಿಯಮ ಉಲ್ಲಂಘನೆ: 1,200 ಕ್ಕೂ ಹೆಚ್ಚು ಜನರ ಬಂಧನ - violating lockdown rules
ಮಿಳುನಾಡು ಪೊಲೀಸರು ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 1,252 ಜನರನ್ನು ಬಂಧಿಸಿದ್ದಾರೆ.

ಲಾಕ್‌ಡೌನ್ ನಿಯಮ ಉಲ್ಲಂಘನೆ
ಸರ್ಕಾರ ಹೊರಡಿಸಿದ ಆದೇಶ ಉಲ್ಲಂಘಿಸಿದ್ದಕ್ಕಾಗಿ ತಮಿಳುನಾಡು ಪೊಲೀಸರು 144ನೇ ಸೆಕ್ಷನ್ ಅಡಿ 1,252 ಜನರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಕೊರೊನಾ ವೈರಸ್ ಬಗ್ಗೆ ಕಿಡಿಗೇಡಿಗಳು ಸುಳ್ಳು ವದಂತಿಗಳನ್ನ ಹಬ್ಬಿಸುತ್ತಿದ್ದಾರೆ. ಇಂತಹ 16 ಪ್ರಕರಣಗಳು ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲ ಕ್ವಾರೆಂಟೈನ್ ಉಲ್ಲಂಘಿಸಿದ ಇತರ ಆರು ಮಂದಿಯ ವಿರುದ್ಧವೂ ಕೂಡ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಕಾನೂನು ಉಲ್ಲಂಘಿಸಿದರೆ, ಇಂತಹುದ್ದೇ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾರೆ.