ಕರ್ನಾಟಕ

karnataka

ETV Bharat / bharat

ಮುಂಬೈಗೆ ತೆರಳುವ ಮುನ್ನ ಈ ರೈಲುಗಳ ವೇಳಾಪಟ್ಟಿ ಗಮನಿಸಿ - ರೈಲ್ವೆ ಇಲಾಖೆ

ಮುಂಬೈ ಸುತ್ತಮುತ್ತ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ನೀರು ನಿಂತಿದೆ. ರೈಲು ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಸತತ ಮಳೆಯಿಂದಾಗಿ ಮುಂಬೈ, ಸಿಯಾನ್, ನಾಗ್ಪಾಡ, ನಾಲಾ ಸೊಪಾರಾ, ಸಂತ ಕ್ರೂಸ್, ಅಂಧೇರಿ ಮತ್ತು ಚೆಂಬೂರ್​ಗಳಲ್ಲಿ ನೀರು ನಿಂತಿವೆ. ಪ್ರಯಾಣಿಕರ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮುಂಬೈ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ಜನ

By

Published : Aug 5, 2019, 6:25 AM IST

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಧಾರಾಕಾರ ಮಳೆಯ ಅಬ್ಬರ ಮುಂದುವರೆದಿದ್ದು, ಕೇಂದ್ರ ರೈಲ್ವೆ 12 ರೈಲುಗಳ ಸಂಚಾರ ರದ್ದುಪಡಿಸಿದೆ.

ಮುಂಬೈ ಸುತ್ತಮುತ್ತ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ನೀರು ನಿಂತಿದೆ. ರೈಲು ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ಸತತ ಮಳೆಯಿಂದಾಗಿ ಮುಂಬೈ, ಸಿಯಾನ್, ನಾಗ್ಪಾಡ, ಸಂತ ಕ್ರೂಸ್, ಅಂಧೇರಿ ಮತ್ತು ಚೆಂಬೂರ್​ಗಳು ನೀರಿನಿಂದ ಆವೃತ್ತವಾಗಿವೆ. ಪ್ರಯಾಣಿಕರ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕೇಂದ್ರ ರೈಲ್ವೆ ಹೊರಡಿಸಿದ ರೈಲುಗಳ ವೇಳಾ ಪಟ್ಟಿ

ಮಂಗಳೂರು- ಮುಂಬೈ ಸಿಎಸ್​ಎಂಟಿ 12134 ಎಕ್ಸ್​ಪ್ರೆಸ್​, ಮಡ್ಗಾಂವ್​- ಮುಂಬೈ ಸಿಎಸ್​ಎಂಟಿ ಕೋನಾರ್ಕ್​ ಎಕ್ಸ್​ಪ್ರೆಸ್ 10112​, ಲೋಕಮಾನ್ಯ ತಿಲಕ್​​- ತಿರುವನಂತಪುರಂ ಸೆಂಟ್ರಲ್​ ನೇತ್ರಾವತಿ ಎಕ್ಸ್​ಪ್ರೆಸ್​ 16345, ಮುಂಬೈ ಸಿಎಸ್​ಎಂಟಿ- ಮಂಗಳೂರು ಎಕ್ಸ್​ಪ್ರೆಸ್​ 12133, ಲೋಕಮಾನ್ಯ ತಿಲಕ್​- ಮಂಗಳೂರು ಸೆಂಟ್ರಲ್​ ಮತ್ಸ್ಯಗಂಧ ಎಕ್ಸ್​ಪ್ರೆಸ್​ 12619 ಸೇರಿದಂತೆ ಒಟ್ಟು 12 ರೈಲುಗಳ ಸಂಚಾರ ರದ್ದಾಗಿದೆ. ರೈಲುಗಳ ರದ್ದತಿಯಿಂದ ಸಾವಿರಾರು ಸಂಖ್ಯೆಯ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಜಮಾವಣೆಗೊಂಡಿದ್ದಾರೆ.

6 ರೈಲುಗಳ ಅಂತಿಮ ಸಂಚಾರದ ಮಾರ್ಗವನ್ನು ಕಡಿತಗೊಳಿಸಲಾಗಿದೆ. 2 ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದ್ದು, ರದ್ದು ಪಡಿಸಲಾದ ಒಂದು ರೈಲನ್ನು ಮರು ಸಂಚಾರಕ್ಕೆ ಅವಕಾಶ ನೀಡಿಲಾಗಿದೆ ಎಂದು ಕೇಂದ್ರ ರೈಲ್ವೆ ಮಾಹಿತಿ ನೀಡಿದೆ.

ABOUT THE AUTHOR

...view details