ನವದೆಹಲಿ:ದೇಶದಲ್ಲಿ ಈವರೆಗೆ 10,017 ಕೊರೊನಾ ಪೀಡಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಗುಡ್ನ್ಯೂಸ್: ದೇಶದಲ್ಲಿ 10 ಸಾವಿರ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖ - India corona discharge
ದೇಶದಲ್ಲಿ ಒಟ್ಟು 10,017 ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರ ಸಂಖ್ಯೆ 10 ಸಾವಿರ ದಾಟಿದ್ದು, ಕೊರೊನಾ ವಿರುದ್ಧದ ಹೋರಾಟಗಾರರಲ್ಲಿ ಖುಷಿ ತರಿಸಿದೆ. ಅಲ್ಲದೇ ಜನಸಾಮಾನ್ಯರಲ್ಲಿದ್ದ ಭೀತಿಯನ್ನು ಕೊಂಚ ಮಟ್ಟಿಗೆ ದೂರ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆಯು ಇಂದು ಸಂಜೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ, ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 37,776ಕ್ಕೇರಿದ್ದು, ಈವರೆಗೆ ದೇಶದಲ್ಲಿ 1,223 ಜನ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಒಟ್ಟು 10,017 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರ ಸಂಖ್ಯೆ 10 ಸಾವಿರ ದಾಟಿದ್ದು, ಕೊರೊನಾ ವಿರುದ್ಧದ ಹೋರಾಟಗಾರರಲ್ಲಿ ಖುಷಿ ತರಿಸಿದೆ. ಅಲ್ಲದೇ ಜನಸಾಮಾನ್ಯರಲ್ಲಿದ್ದ ಭೀತಿಯನ್ನು ಕೊಂಚ ಮಟ್ಟಿಗೆ ದೂರ ಮಾಡಿದೆ.
ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೊರೊನಾ ಗುಣಮುಖರ ಸಂಖ್ಯೆ ಹೆಚ್ಚಾಗುತ್ತಿದೆ. ಏಪ್ರಿಲ್ 30ರಂದು ದೇಶದಲ್ಲಿ 629 ಜನ ಗುಣಮುಖರಾಗಿದ್ದರು. ಮೇ 1ರಂದು 564 ಜನ ಗುಣಮುಖರಾಗಿದ್ದರೆ, ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಇವತ್ತು1062 ಜನ ಡಿಸ್ಚಾರ್ಜ್ ಆಗಿದ್ದಾರೆ. ಬೆಳಗ್ಗೆಯವರೆಗೆ 9,950 ಇದ್ದ ಗುಣಮುಖರ ಸಂಖ್ಯೆ ಇಂದು ಸಂಜೆಯ ವೇಳೇಗೆ 10,017ಕ್ಕೇರಿದೆ. ನಾಳೆ ಮುಂಜಾನೆಯವರೆಗೆ ಇನ್ನಷ್ಟು ನಿಖರ ಮಾಹಿತಿ ಲಭ್ಯವಾಗಲಿದ್ದು, ಗುಣಮುಖರಾದವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.