ಲಖನೌ (ಉತ್ತರ ಪ್ರದೇಶ):ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಕಾರಣವಾದ ಆರೋಪದಡಿ ಪಿಎಫ್ಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ 108 ಮಂದಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಯುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಪಿಎಫ್ಐ ಜೊತೆ ಗುರ್ತಿಸಿಕೊಂಡಿದ್ದ 108 ಆರೋಪಿಗಳು ಅಂದರ್ - 108 ಪಿಎಫ್ಐ ಕಾರ್ಯಕರ್ತರ ಬಂಧನ
ಸಿಎಎ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಕಾರಣವಾದ ಆರೋಪದಲ್ಲಿ ಪಿಎಫ್ಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ 108 ಮಂದಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
![ಯುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಪಿಎಫ್ಐ ಜೊತೆ ಗುರ್ತಿಸಿಕೊಂಡಿದ್ದ 108 ಆರೋಪಿಗಳು ಅಂದರ್ Over 100 people linked with PFI arrested,108 ಪಿಎಫ್ಐ ಕಾರ್ಯಕರ್ತರ ಬಂಧನ](https://etvbharatimages.akamaized.net/etvbharat/prod-images/768-512-5941709-439-5941709-1580726627365.jpg)
ಈ ಹಿಂದೆ 25 ಜನರನ್ನ ಬಂದಿಸಲಾಗಿತ್ತು. ಇದೀಗ ಕಳೆದ ನಾಲ್ಕು ದಿನಗಳಲ್ಲಿ ಮತ್ತೆ ಕೆಲವರನ್ನ ಬಂಧಿಸಿದ್ದು 4 ದಿನದಲ್ಲಿ ಒಟ್ಟು 108 ಜನರನ್ನ ಬಂಧಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕೆ. ಅವಸ್ಥಿ ತಿಳಿಸಿದ್ದಾರೆ. ಅವರ ಆರ್ಥಿಕ ವ್ಯವಹಾರ ಸೇರಿದಂತೆ, ಸಂಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ಕೇಂದ್ರದ ಏಜೆನ್ಸಿಗಳ ಸಹಾಯ ಕೂಡ ಪಡೆದುಕೊಳ್ಳಲಾಗುತ್ತಿದೆ. ಪಿಎಫ್ಐ ಸಂಘಟನೆ ಜೊತೆ ಗುರ್ತಿಸಿಕೊಂಡಿರುವವರನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ನಮ್ಮ ಉದ್ದೇಶ ಎಂದಿದ್ದಾರೆ.
ಲಖನೌನಲ್ಲಿ 14 ಮಂದಿ, ಸೀತಾಪುರ್ 3, ಮೀರತ್ 21, ಗಾಜಿಯಾಬಾದ್ 3, ಮುಜಾಫರ್ ನಗರ 6, ಶಮ್ಲಿಯಲ್ಲಿ 7, ಬಿಜ್ನೋರ್ 4, ವಾರಣಾಸಿಯಲ್ಲಿ 20, ಕಾನ್ಪುರ 5, ಬಹ್ರೆಚ್ನಲ್ಲಿ 16, ಗೊಂಡ, ಹಾಪುರ್ ಮತ್ತು ಜೌನ್ಪುರ್ನಲ್ಲಿ ತಲಾ ಓರ್ವರನ್ನ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಮಧ್ಯಂತರ ಡಿಜಿಪಿ ಹಿತೇಶ್ ಚಂದ್ರ ಅವಸ್ಥಿ ಮಾಹಿತಿ ನೀಡಿದ್ದಾರೆ.