ಕರ್ನಾಟಕ

karnataka

ETV Bharat / bharat

ಸಿಎಪಿಎಫ್​ನಲ್ಲಿದೆ 1 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳು!! - ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್

ನೇಮಕಾತಿ ನಿಯಮಗಳ ನಿಬಂಧನೆಗಳ ಪ್ರಕಾರ ನೇರ ನೇಮಕಾತಿ, ಬಡ್ತಿ ಮತ್ತು ಡೆಪ್ಯುಟೇಶನ್ ಮೂಲಕ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕಾರ್ಯವಿಧಾನವಿದೆ ಎಂದು ಅವರು ತಿಳಿಸಿದರು. ಸಿಎಪಿಎಫ್‌ಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಇದು ನಿರಂತರ ಪ್ರಕ್ರಿಯೆ..

crpf
crpf

By

Published : Sep 21, 2020, 4:28 PM IST

ನವದೆಹಲಿ :ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್‌ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಒಂದು ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ ಇವೆ. ನಿವೃತ್ತಿ, ರಾಜೀನಾಮೆ ಮತ್ತು ಸಾವುಗಳಿಂದಾಗಿ ಖಾಲಿ ಹುದ್ದೆಗಳು ಹೆಚ್ಚಾಗಿವೆ ಎಂದು ರಾಜ್ಯಸಭೆಗೆ ತಿಳಿಸಲಾಗಿದೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಮಾತನಾಡಿ, ಬಿಎಸ್‌ಎಫ್ ಅತಿ ಹೆಚ್ಚು ಖಾಲಿ ಹುದ್ದೆಗಳನ್ನು ಹೊಂದಿದ್ದು, (28,926), ನಂತರದ ಸ್ಥಾನದಲ್ಲಿ ಸಿಆರ್‌ಪಿಎಫ್ (26,506), ಸಿಐಎಸ್ಎಫ್ (23906), ಎಸ್‌ಎಸ್‌ಬಿ (18,643), ಐಟಿಬಿಪಿ (5,784) ಮತ್ತು ಅಸ್ಸಾಂ ರೈಫಲ್ಸ್ (7,328) ಇದೆ ಎಂದರು.

'ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿನ ಖಾಲಿ ಹುದ್ದೆಗಳು ನಿವೃತ್ತಿ, ರಾಜೀನಾಮೆ, ಸಾವು, ಹೊಸ ಏರಿಕೆ, ಹೊಸ ಹುದ್ದೆಗಳ ರಚನೆ, ಕೇಡರ್ ವಿಮರ್ಶೆಗಳು ಇತ್ಯಾದಿಗಳಿಂದ ಉಂಟಾಗುತ್ತವೆ. ಈ ಖಾಲಿ ಹುದ್ದೆಗಳಲ್ಲಿ ಹೆಚ್ಚಿನವು ಕಾನ್ಸ್‌ಟೇಬಲ್ ದರ್ಜೆಯಲ್ಲಿವೆ' ಎಂದು ಅವರು ಹೇಳಿದರು.

ನೇಮಕಾತಿ ನಿಯಮಗಳ ನಿಬಂಧನೆಗಳ ಪ್ರಕಾರ ನೇರ ನೇಮಕಾತಿ, ಬಡ್ತಿ ಮತ್ತು ಡೆಪ್ಯುಟೇಶನ್ ಮೂಲಕ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕಾರ್ಯವಿಧಾನವಿದೆ ಎಂದು ಅವರು ತಿಳಿಸಿದರು. ಸಿಎಪಿಎಫ್‌ಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಇದು ನಿರಂತರ ಪ್ರಕ್ರಿಯೆ.

ಪ್ರಸ್ತುತ ಕಾನ್ಸ್‌ಟೇಬಲ್​ಗಳ 60,210 ಹುದ್ದೆ, ಸಿಬ್ಬಂದಿ ಆಯ್ಕೆ ಆಯೋಗದ ಮೂಲಕ ಸಬ್‌ಇನ್ಸ್‌ಪೆಕ್ಟರ್‌ಗಳ 2,534 ಹುದ್ದೆ ಮತ್ತು ಕೇಂದ್ರ ಸಾರ್ವಜನಿಕ ಸೇವಾ ಆಯೋಗದ ಮೂಲಕ ಸಹಾಯಕ ಕಮಾಂಡೆಂಟ್‌ಗಳ 330 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.

For All Latest Updates

ABOUT THE AUTHOR

...view details