ಭುವನೇಶ್ವರ (ಒಡಿಶಾ): ಡೆಡ್ಲಿ ಅಂಫಾನ್ ಚಂಡಮಾರುತ ಇಂದು ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ದ್ವೀಪಗಳ ನಡುವೆ ಅಪ್ಪಳಿಸಲಿದೆ. ಮುಂಜಾಗ್ರತಾ ಕ್ರಮವಾಗಿ ಒಡಿಶಾ ರಾಜ್ಯದಲ್ಲಿ ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಒಡಿಶಾದ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ಚಂಡಮಾರುತದಿಂದಾಗಿ ಒಡಿಶಾದಲ್ಲಿ ಭಾರೀ ಪ್ರಮಾಣದ ಮಳೆ ಸುರಿಯಲಿದ್ದು, ಬಲವಾದ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಹೀಗಾಗಿ ಒಡಿಶಾದ 13 ಜಿಲ್ಲೆಗಳಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾ್ಇ 1,704 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ.
ಒಡಿಶಾದ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ಸಮಯ ಕಳೆದಂತೆ ಚಂಡಮಾರುತದ ಭಯ ಜನರ ಮನಸ್ಸಿನಲ್ಲಿ ಬೆಳೆಯುತ್ತಿದೆ. ನಾವು ಗಾಳಿಗೆ ಹೆಚ್ಚು ಹೆಚ್ಚು ಹೆದರುತ್ತಿದ್ದೇವೆ. ಇಂದು ಮಧ್ಯಾಹ್ನದ ವೇಳೆಗೆ ಚಂಡಮಾರುತ ಒಡಿಶಾದ ಪಾರಾದೀಪ್ ಅನ್ನು ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರ ಪರಿಣಾಮವಾಗಿ, ಒಡಿಶಾದ ಉತ್ತರ ಕರಾವಳಿ ಪ್ರದೇಶಗಳಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಸ್ಥಳೀಯರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈಗಾಗಲೆ ಒಡಿಶಾ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಕೆಲವೆಡೆ ಮರಗಳು ಧರೆಗುರುಳಿವೆ. ಚಂಡಮಾರುತ ಅಪ್ಪಳಿಸಲಿರುವ ಪಶ್ಚಿಮ ಬಂಗಾಳದ ದಿಘಾ ಬಳಿ ಸಮುದ್ರದ ಉಬ್ಬರಿಳಿತ ಜೋರಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ, ಅಂಫಾನ್ ಚಂಡಮಾರುತವು ಒಡಿಶಾದ ಪಾರಾದೀಪ್ನಿಂದ ದಕ್ಷಿಣಕ್ಕೆ 125 ಕಿ.ಮೀ, ದಿಘಾದಿಂದ 390 ಕಿ.ಮೀ ದಕ್ಷಿಣ-ನೈರುತ್ಯ ದಿಕ್ಕಿನಲ್ಲಿದೆ ಎಂದು ಹೇಳಿದೆ.