ಕರ್ನಾಟಕ

karnataka

ETV Bharat / bharat

ಬಿನ್ ಲಾಡೆನ್​ ನಮ್ ಹೀರೋ: ಪಾಕ್​ ಮಾಜಿ ಅಧ್ಯಕ್ಷ ಮುಷರಫ್​ ವಿಡಿಯೋ ವೈರಲ್​! - ಪಾಕ್​ ಮಾಜಿ ಅಧ್ಯಕ್ಷ ಮುಷರಫ್

ಅಮೆರಿಕದ ಅವಳಿ ವಾಣಿಜ್ಯ ಕಟ್ಟಡ ಧ್ವಂಸಗೊಳಿಸಿ ನೂರಾರು ಜನ ಅಮಾಯಕರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ಒಸಾಮಾ ಬಿನ್​ ಲಾಡೆನ್​ 'ಪಾಕ್​ನ ಹೀರೋ' ಎಂದು ಅಲ್ಲಿನ ಮಾಜಿ ಸೇನಾಧ್ಯಕ್ಷ ಪರ್ವೇಜ್ ಮುಷರಫ್ ವಿಚಿತ್ರ ಹೇಳಿಕೆ ನೀಡಿದ್ದಾರೆ.

ಪಾಕ್​ ಮಾಜಿ ಅಧ್ಯಕ್ಷ ಮುಷರಫ್

By

Published : Nov 14, 2019, 1:08 PM IST

Updated : Nov 14, 2019, 1:23 PM IST

ಇಸ್ಲಾಮಾಬಾದ್​​:ಅಮೆರಿಕದ ಅವಳಿ ವಾಣಿಜ್ಯ ಕಟ್ಟಡ ಧರೆಗುರುಳಿಸಿದ್ದ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಕುರಿತು ಇದೀಗ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ಅಚ್ಚರಿ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್​ ಆಗಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಮುಷರಫ್,​ ಒಸಾಮಾ ಬಿನ್​ ಲಾಡೆನ್​ ಹಾಗೂ ಜಲಾಲುದ್ದೀನ್​ ಹಖಾನಿ ನಮ್ಮ ದೇಶದ ಹೀರೋಗಳು ಎಂದಿದ್ದಾರೆ. ಇದೇ ವೇಳೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕೆಲವರನ್ನ ನಾವು ತರಬೇತಿಗೊಳಿಸಿ ಭಾರತೀಯ ಯೋಧರ ವಿರುದ್ಧ ಹೋರಾಡಲು ಮುಂದೆ ಬಿಟ್ಟಿದ್ದೆವು ಎಂಬ ಆಘಾತಕಾರಿ ಸತ್ಯವನ್ನೂ ಹೊರಹಾಕಿದ್ದಾರೆ.

ಗಡಿಯಲ್ಲಿ ಭಾರತದ ವಿರುದ್ಧ ಹೋರಾಟ ಮಾಡುವ ಪ್ರತಿಯೊಬ್ಬರೂ ಪಾಕ್​ನ ಹೀರೋಗಳು ಎಂದು ಹೇಳಿರುವ ಪರ್ವೇಜ್​, ಅವರನ್ನು ನಾವು ಬಹಿರಂಗವಾಗಿ ಭಾರತೀಯ ಸೇನೆಯ ವಿರುದ್ಧ ಹೋರಾಡಲು ಅಣಿಗೊಳಿಸುತ್ತಿದ್ದೆವು ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿರುವುದು ಏನು?
1979ರಲ್ಲಿ ನಾವು ಅಫ್ಘಾನಿಸ್ತಾನದ ಕೆಲ ಪ್ರದೇಶದಲ್ಲಿ ಮಿಲಿಟರಿ ಕೇಂದ್ರಗಳನ್ನು ಆರಂಭಿಸಿದ್ದೆವು. ಪಾಕಿಸ್ತಾನಕ್ಕೆ ಅನುಕೂಲವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಇದೇ ವೇಳೆ ಕೆಲ ಉಗ್ರ ಸಂಘಟನೆಗಳಿಗೆ ತರಬೇತಿ ನೀಡಿ ಶಸ್ತ್ರಾಸ್ತ್ರಗಳನ್ನೂ ನಾವು ನೀಡಿದ್ದೇವೆ. ಭಾರತ-ಪಾಕ್ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ಹೋರಾಡಲು ಅವರನ್ನು ನಾವು ಸಜ್ಜುಗೊಳಿಸಿ ಕಳುಹಿಸಿದ್ದೆವು. ದಿನಕಳೆದಂತೆ ಪರಿಸ್ಥಿತಿ ಬದಲಾಗಿದ್ದರಿಂದ ಇದೀಗ ಅವರನ್ನು ವಿಲನ್​ಗಳಂತೆ ನೋಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ರಾಜಕಾರಣಿ ಫರಾತುಲ್ಲಾ ಬಾಬರ್ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಭಯೋತ್ಪಾದಕ ಕೃತ್ಯಗಳಿಗೆ ಪಾಕ್‌ ಪ್ರತ್ಯಕ್ಷ ಹಾಗು ಪರೋಕ್ಷ ಬೆಂಬಲ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಈ ವಿಚಾರವನ್ನು ಅಲ್ಲಿನ ಮಾಜಿ ಅಧ್ಯಕ್ಷರೇ ಒಪ್ಪಿಕೊಂಡಿದ್ದು ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Last Updated : Nov 14, 2019, 1:23 PM IST

ABOUT THE AUTHOR

...view details