ನವದೆಹಲಿ: ಶುಕ್ರವಾರದಿಂದ ಆರಂಭವಾಗಲಿರುವ ಸಂಸತ್ನ ಬಜೆಟ್ ಅಧಿವೇಶನಕ್ಕೆ ಜಂಟಿ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ಫೆಬ್ರವರಿ 1 ರಂದು ಬಜೆಟ್ ಮಂಡನೆಯ ನಂತರ ಪ್ರತಿಪಕ್ಷಗಳು ಸಭೆ ಸೇರುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನಕ್ಕೆ ಜಂಟಿ ಕಾರ್ಯತಂತ್ರ, ಫೆಬ್ರವರಿ 1ರಂದು ಪ್ರತಿಪಕ್ಷಗಳ ಸಭೆ! - ಬಜೆಟ್ ಅಧಿವೇಶನಕ್ಕೆ ಪ್ರತಿಪಕ್ಷಗಳ ಜಂಟಿ ಕಾರ್ಯತಂತ್ರ
ಫೆಬ್ರವರಿ 1 ರಂದು ಬಜೆಟ್ ಮಂಡನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಯಾರಿ ನಡೆಸಿದ್ದಾರೆ. ಅದರೊಂದಿಗೆ ಸರ್ಕಾರವನ್ನು ಪ್ರತಿ ಹಂತದಲ್ಲೂ ಪ್ರಶ್ನಿಸಲು ಪ್ರತಿಪಕ್ಷಗಳು ಕೂಡಾ ಕಾರ್ಯತಂತ್ರ ರೂಪಿಸುತ್ತಿದೆ. ಹೀಗಾಗಿ ಫೆಬ್ರವರಿ 1 ರಂದು ಬಜೆಟ್ ಮಂಡನೆಯ ನಂತರ ಪ್ರತಿಪಕ್ಷಗಳು ಸಭೆ ಸೇರುವ ಸಾಧ್ಯತೆ ಇದೆ.
![ಬಜೆಟ್ ಅಧಿವೇಶನಕ್ಕೆ ಜಂಟಿ ಕಾರ್ಯತಂತ್ರ, ಫೆಬ್ರವರಿ 1ರಂದು ಪ್ರತಿಪಕ್ಷಗಳ ಸಭೆ! Opposition parties meeting](https://etvbharatimages.akamaized.net/etvbharat/prod-images/768-512-5893340-thumbnail-3x2-jayjpg.jpg)
ಪ್ರತಿಪಕ್ಷಗಳ ಸಭೆ
ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ವಿವಿಧ ಪಕ್ಷಗಳು ಈಗಾಗಲೇ ತಮ್ಮ ವೈಯಕ್ತಿಕ ಕಾರ್ಯತಂತ್ರದ ಸಭೆಗಳನ್ನು ನಡೆಸಿವೆ. ಜನಸಾಮಾನ್ಯರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರದ ನಿಲುವಿನ ಬಗ್ಗೆ ಜಂಟಿ ಕಾರ್ಯತಂತ್ರವನ್ನು ರೂಪಿಸಿ, ಸರ್ಕಾರವನ್ನು ಪ್ರಶ್ನಿಸುವಲ್ಲಿ ಕಾರ್ಯತಂತ್ರ ಹೆಣೆಯಲು ಎಲ್ಲ ಪಕ್ಷಗಳು ಒಗ್ಗೂಡುತ್ತವೆ ಎಂದು ಮೂಲಗಳು ತಿಳಿಸಿವೆ.
ಇವುಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಬೆಲೆ ಏರಿಕೆ ಮತ್ತು ಹಣದುಬ್ಬರ, ಕಳಪೆ ಆರ್ಥಿಕ ಸ್ಥಿತಿ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ಮೇಲಿನ ಪ್ರತಿಭಟನೆಗಳೂ ಸೇರಿದೆ ಎಂದು ಪ್ರತಿಪಕ್ಷಗಳ ಮೂಲಗಳು ತಿಳಿಸಿವೆ.