ನವದೆಹಲಿ:ರಾಜ್ಯಸಭೆಯ ಉಪಸಭಾಧ್ಯಕ್ಷ ಹರಿವಂಶ ಅವರ ವಿರುದ್ಧ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿವೆ. ಕೃಷಿ ಸಂಬಂಧಿ ಮಸೂದೆಗಳನ್ನು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮಂಡಿಸುವ ವೇಳೆ ಚರ್ಚೆಯನ್ನು ಮುಂದೂಡಿದ ಕಾರಣಕ್ಕೆ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿವೆ.
ಕೇಂದ್ರ ಕೃಷಿ ನರೇಂದ್ರ ಸಿಂಗ್ ತೋಮರ್ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಮಂಡಿಸಿದ್ದರು.
ಈ ವೇಳೆ ಚರ್ಚೆಗೆ ಉತ್ತರ ಕೊಡುವುದನ್ನು ಹರಿವಂಶ್ ಸೋಮವಾರಕ್ಕೆ ಮುಂದೂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಸಂಸದರು ಪೋಡಿಯಂನ ಮೈಕ್ ಕಸಿದುಕೊಳ್ಳಲು ಯತ್ನಿಸಿ, ಹಾಳೆಗಳನ್ನು ಹರಿದು, ಡೆಪ್ಯುಟಿ ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಕೊನೆಗೂ ಡೆಪ್ಯುಟಿ ಸ್ಪೀಕರ್ ಸಂಸದರ ಒತ್ತಡಕ್ಕೆ ಮಣಿಯದ ಕಾರಣ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದಾರೆ. ಸುಮಾರು 100 ಮಂದಿ ಸದಸ್ಯರ ಹಸ್ತಾಕ್ಷರದೊಂದಿಗೆ ಪಾರ್ಲಿಮೆಂಟ್ ಕಚೇರಿಗೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳಿಂದಾಗಿ ಈ ಮಸೂದೆಗಳನ್ನು ಅಂಗೀಕಾರ ಮಾಡಲಾಗಿದೆ. ಇದು ರಾಜ್ಯಸಭಾ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಲಿದೆ ಎಂದು ಕಾಂಗ್ರೆಸ್ ಸಂಸದ ಅಹ್ಮದ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.