ಕರ್ನಾಟಕ

karnataka

ETV Bharat / bharat

ಬಾಹ್ಯಾಕಾಶ ವಿಜ್ಞಾನದಲ್ಲಿ ಖಾಸಗಿ ಪಾಲುದಾರಿಕೆಯಿಂದ ಮತ್ತಷ್ಟು ಅಭಿವೃದ್ಧಿ: ಕೆ.ಶಿವನ್​ - ಬಾಹ್ಯಾಕಾಶ ಇಲಾಖೆ

ಭಾರತದಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಇಸ್ರೋ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ISRO chief K Sivan
ಇಸ್ರೋ ಮುಖ್ಯಸ್ಥ ಕೆ.ಶಿವನ್

By

Published : Jun 25, 2020, 12:42 PM IST

ಬೆಂಗಳೂರು:ಕೇಂದ್ರಕ್ಯಾಬಿನೆಟ್​ನ ನಿರ್ಧಾರದಂತೆ ಬಾಹ್ಯಾಕಾಶ ವಿಜ್ಞಾನದಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯಿಂದ ದೇಶ ಹೆಚ್ಚು ಮುಂದುವರೆಯಬಹುದು ಹಾಗೂ ಸ್ವಾವಲಂಬನೆ ಸಾಧಿಸಬಹುದು ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್​ ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ಮೂಲಕ ಸಂವಾದ ನಡೆಸಿದ ಶಿವನ್​ ಬಾಹ್ಯಾಕಾಶ ವಿಜ್ಞಾನದಲ್ಲಿ ಬಿಡಿಭಾಗಗಳ ಸರಬರಾಜು ಪ್ರಕ್ರಿಯೆಯಲ್ಲಿ ನಾವು ಖಾಸಗಿ ಸಂಸ್ಥೆಗಳ ಮೇಲೆ ನಂಬಿಕೆ ಇಡುತ್ತೇವೆ. ಬಾಹ್ಯಾಕಾಶ ಇಲಾಖೆ ರಾಕೆಟ್​ ಹಾಗೂ ಸ್ಯಾಟಲೈಟ್​ಗಳ ತಯಾರಿಕೆಗೆ ಖಾಸಗಿಯವರ ಸಹಭಾಗಿತ್ವ ಬಯಸುತ್ತದೆ ಎಂದು ಸ್ಪಷ್ಟಪಡಿದ್ದಾರೆ.

ಬಾಹ್ಯಾಕಾಶ ವಿಜ್ಞಾನದಲ್ಲಿ ಈವರೆಗೆ ಇಸ್ರೋ ಮಾತ್ರವೇ ಎಲ್ಲವನ್ನೂ ನಿಭಾಯಿಸುತ್ತಿತ್ತು. ಈಗ ಖಾಸಗಿ ಸಹಭಾಗಿತ್ವಕ್ಕೆ ತೆರೆದುಕೊಳ್ಳುವ ಕಾರಣದಿಂದ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ಭಾರತೀಯ ಕೈಗಾರಿಕೆಗಳು ವಿಶ್ವದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ ಸರ್ಕಾರ ಇನ್​ಸ್ಪೇಸ್​ (INSPACE) ಎಂಬ ಸ್ವಾಯುತ್ತ ನೋಡಲ್​ ಏಜೆನ್ಸಿಯನ್ನು ಇಸ್ರೋ, ಬಾಹ್ಯಾಕಾಶ ಇಲಾಖೆಗಳ ಅಡಿಯಲ್ಲಿ ರೂಪುಗೊಳ್ಳಲಿದ್ದು, ಬಾಹ್ಯಾಕಾಶ ವಿಜ್ಞಾನಕ್ಕೆ ಬೇಕಾದ ಬಿಡಿಭಾಗಗಳನ್ನು ಒದಗಿಸುವ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು ನೀಡಲಿದೆ ಎಂದಿದ್ದಾರೆ. ಈ ಏಜೆನ್ಸಿ ಮೂರರಿಂದ ಆರು ತಿಂಗಳ ಅವಧಿಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಆಸಕ್ತಿ ಇರುವವರು ಇಸ್ರೋದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದಿದ್ದಾರೆ.

ಇದರ ಜೊತೆಗೆ ಈ ವರ್ಷ 10 ಬಾಹ್ಯಾಕಾಶ ಮಿಷನ್​ಗಳು ಕಾರ್ಯಗತಗೊಳ್ಳಬೇಕಿದ್ದು, ಕೊರೊನಾ ವೈರಸ್ ಕಾರಣಕ್ಕೆ ರದ್ದಾಗಿವೆ. ದೇಶದ ಮಹತ್ವದ ಯೋಜನೆಗಳಾದ ಮಾನವನ ಬಾಹ್ಯಾಕಾಶ ಯಾನ ಹಾಗೂ ಮೂನ್​ ಮಿಷನ್​ ತಡವಾಗಲಿದೆ ಎಂದಿದ್ದಾರೆ.

ABOUT THE AUTHOR

...view details