ಕರ್ನಾಟಕ

karnataka

By

Published : Jun 8, 2020, 4:43 PM IST

ETV Bharat / bharat

ಆಪರೇಷನ್ ಸಮುದ್ರ ಸೇತು: ಇರಾನ್​ನಲ್ಲಿನ ಭಾರತೀಯರನ್ನು ಕರೆತರಲು ತೆರಳಿದ ಯುದ್ಧ ನೌಕೆ

ಐಎನ್‌ಎಸ್ ಶಾರ್ದುಲ್ ಯುದ್ಧ ನೌಕೆಯು ಇಂದು ಬೆಳಗ್ಗೆ ಇರಾನ್‌ನ ಅಬ್ಬಾಸ್ ಬಂದರು ತಲುಪಿದೆ. ಅಲ್ಲಿನ ಭಾರತೀಯರನ್ನು ಗುಜರಾತ್​ನ ಪೋರ್​ ​ಬಂದರಿಗೆ ಕರೆತರಲಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ.

ನೌಕಾಪಡೆ

ನವದೆಹಲಿ:ಇರಾನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಕಾರ್ಯಾಚರಣೆಯ ಭಾಗವಾಗಿ ಭಾರತೀಯ ನೌಕಾಪಡೆ ತನ್ನ ಯುದ್ಧನೌಕೆ ಐಎನ್‌ಎಸ್ ಶಾರ್ದುಲ್ ಕಳುಹಿಸಿದೆ.

ಭಾರತೀಯ ನೌಕಾ ಪಡೆಯ ಶಾರ್ದುಲ್ ಹಡಗು ಇರಾನ್​ನ ಬಂದರು ಅಬ್ಬಾಸ್​ನಿಂದ ಗುಜರಾತ್​ನ ಪೊರ್​ ಬಂದರ್​ಗೆ ಭಾರತೀಯರನ್ನು ಸ್ಥಳಾಂತರಿಸಲಿದೆ. ಇರಾನ್​ನ್ನಲ್ಲಿರುವ ಭಾರತೀಯ ಮಿಷನ್, ಸ್ಥಳಾಂತರ ಆಗಲಿರುವ ಭಾರತೀಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಅವರ ಪ್ರಯಾಣಕ್ಕೆ ಅಗತ್ಯವಾದ ವೈದ್ಯಕೀಯ ತಪಾಸಣೆಯ ಕಲ್ಪಿಸಲಾಗಿದೆ ಎಂದು ಹೇಳಿದೆ.

ನೌಕಾಪಡೆಯು ಕೋವಿಡ್​ ಸಂಬಂಧಿತ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮಾನದಂಡಗಳನ್ನು ಐಎನ್‌ಎಸ್ ಶಾರ್ದುಲ್‌ನಲ್ಲಿ ಒದಗಿಸಲಾಗಿದೆ. ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ, ವೈದ್ಯರು, ನೈರ್ಮಲ್ಯ ಸಿಬ್ಬಂದಿ, ಪೌಷ್ಟಿಕ ತಜ್ಞರು, ವೈದ್ಯಕೀಯ ಮಳಿಗೆ, ಪಡಿತರ ಧಾನ್ಯ, ಮಾಸ್ಕ್​, ವೈಯಕ್ತಿಕ ರಕ್ಷಣಾ ಸಾಧನಗಳು ಸೇರಿದಂತೆ ಇತರೆ ವಿಶೇಷ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.

ABOUT THE AUTHOR

...view details