ನವದೆಹಲಿ: ಆಪರೇಷನ್ ಸಮುದ್ರ ಸೇತು ಅಡಿ 200 ಭಾರತೀಯರನ್ನು ಕರೆತರಲು ಎರಡನೇ ನೌಕೆ ಐಎನ್ಎಸ್ ಮಗರ್ ಮಾಲ್ಡೀವ್ಸ್ನ ಮಾಲೆ ತಲುಪಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್ನಿಂದ ಹೊರಟಿದ್ದ ಐಎನ್ಎಸ್ ಜಲಾಶ್ವ ಮಾಲ್ಡೀವ್ಸ್ನಿಂದ ಕೊಚ್ಚಿ ಬಂದರಿಗೆ ಇಂದು ಬೆಳಗ್ಗೆ 698 ಭಾರತೀಯ ನಾಗರಿಕರನ್ನು ಕರೆತಂದಿದೆ.
ಐಎನ್ಎಸ್ ಮಗರ್ ಕೊಚ್ಚಿ ಬಂದರಿನಿಂದ ಹೊರಟ್ಟಿದ್ದು, ಅಲ್ಲಿಂದ ಕರೆತರುವ ಎಲ್ಲ ಭಾರತೀಯರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಹೊತ್ತು ಸಾಗಿದೆ. ಈ ನೌಕೆಯಲ್ಲಿ ಸುಮಾರು 200 ಭಾರತೀಯರನ್ನು ಕರೆತರುವ ಸಾಮರ್ಥ್ಯವಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ವ್ಯಕ್ತಿಗಳ ನಡುವೆ ಸಾಮಾಜಿಕ ಅಂತರ ಕೂಡಾ ಕಾಪಾಡಿಕೊಳ್ಳಲಾಗುತ್ತದೆ ಎಂದು ನೌಕೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.