ನವದೆಹಲಿ: ಮಾಲ್ಡೀವ್ಸ್ನಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಮಂದಿ ಭಾರತೀಯರನ್ನು ಕರೆತರಲು ಆಪರೇಷನ್ ಸಮುದ್ರ ಸೇತು ಅಡಿಯಲ್ಲಿ ಎರಡನೇ ಹಡಗು ಐಎನ್‌ಎಸ್ ಮಗರ್, ಮಾಲೆ ಬಂದರು ತಲುಪಿದೆ.
ಮಾಲ್ಡೀವ್ಸ್ನಿಂದ 200 ಭಾರತೀಯರನ್ನು ಕರೆತರಲು ಐಎನ್‌ಎಸ್ ಮಗರ್ ಸಿದ್ಧ - ಮಾಲ್ಡೀವ್ಸ್ ಭಾರತೀಯ ನಾಗರೀಕರು
ಈಗಾಗಲೇ ಕಾರ್ಯನಿರತವಾಗಿದ್ದ ಐಎನ್ಎಸ್ ಜಲಾಶ್ವ ಇಂದು ಬೆಳಗ್ಗೆ 698 ಮಾಲ್ಡೀವ್ಸ್ನಿಂದ ಭಾರತೀಯ ನಾಗರಿಕರೊಂದಿಗೆ ಕೊಚ್ಚಿ ಬಂದರನ್ನು ತಲುಪಿದೆ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
![ಮಾಲ್ಡೀವ್ಸ್ನಿಂದ 200 ಭಾರತೀಯರನ್ನು ಕರೆತರಲು ಐಎನ್‌ಎಸ್ ಮಗರ್ ಸಿದ್ಧ Op Samudra Setu: INS Magar arrives at Male port to evacuate over 200 Indians](https://etvbharatimages.akamaized.net/etvbharat/prod-images/768-512-7146314-517-7146314-1589163076171.jpg)
ಮಾಲ್ಡೀವ್ಸ್ನಿಂದ 200 ಭಾರತವಾಸಿಗಳನ್ನು ಕರೆತರಲು ಐಎನ್‌ಎಸ್ ಮಾಗರ್ ಸಿದ್ಧ
ಈಗಾಗಲೇ ಕಾರ್ಯನಿರತವಾಗಿದ್ದ ಐಎನ್ಎಸ್ ಜಲಾಶ್ವ ಇಂದು ಬೆಳಗ್ಗೆ 698 ಮಾಲ್ಡೀವ್ಸ್ನಿಂದ ಭಾರತೀಯ ನಾಗರಿಕರೊಂದಿಗೆ ಕೊಚ್ಚಿ ಬಂದರನ್ನು ತಲುಪಿದೆ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಲ್ಯಾಂಡಿಂಗ್ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಐಎನ್ಎಸ್ ಮಗರ್, ಮಾಲ್ಡೀವ್ಸ್ ಕಡೆಗೆ ಪ್ರಯಾಣಿಸುವ ಮೊದಲು ನಾಗರಿಕರಿಗೆ ನಿರಾತಂಕವಾಗಿ ಪ್ರಯಾಣಿಸಲು ಅಗತ್ಯವಿರುವ ಎಲ್ಲಾ ಆಹಾರ ಪದಾರ್ಥ, ವೈದ್ಯಕೀಯ ಸೇವೆಗಳನ್ನು ನೌಕೆಯಲ್ಲಿ ಹೊಂದಿದೆ. ಕೊಚ್ಚಿ ಬಂದರಿನಲ್ಲಿ ಇವರನ್ನು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೌಕಾಪಡೆ ತಿಳಿಸಿದೆ.