ಕರ್ನಾಟಕ

karnataka

ETV Bharat / bharat

"ಭಾರತ್ ಮಾತಾ ಕಿ ಜೈ" ಹೇಳುವವರು ಮಾತ್ರ ದೇಶದಲ್ಲಿರಬಹುದು: ಧರ್ಮೇಂದ್ರ ಪ್ರಧಾನ್​

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯನ್ನು ವಿರೋಧಿಸುವವರ ಮೇಲೆ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ದೇಶವನ್ನ 'ಧರ್ಮಶಾಲೆ'ಯನ್ನಾಗಿ ಮಾಡಬೇಕಾ? ಭಾರತದಲ್ಲಿ ಯಾರು ಬೇಕಾದರೂ ಬಂದು ನೆಲೆಸಲು ಸಾಧ್ಯವಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾರು "ಭಾರತ್ ಮಾತಾ ಕಿ ಜೈ" ಎಂದು ಹೇಳಲು ಸಿದ್ಧರಿದ್ದಾರೋ ಅವರು ಮಾತ್ರ ನಮ್ಮ ದೇಶದಲ್ಲಿರಲು ಸಾಧ್ಯ ಎಂದು ಹೇಳಿದ್ದಾರೆ.

Dharmendra Pradhan
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

By

Published : Dec 29, 2019, 12:59 PM IST

ಪುಣೆ: "ಭಾರತ್ ಮಾತಾ ಕಿ ಜೈ" ಎಂದು ಹೇಳುವವರು ಮಾತ್ರ ಭಾರತದಲ್ಲಿ ಇರಬಹುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಮಹಾರಾಷ್ಟ್ರದ ಪುಣೆಯಲ್ಲಿ ಶನಿವಾರ ನಡೆದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ನ (ABVP) 54ನೇ ರಾಜ್ಯ ಸಮ್ಮೇಳನದಲ್ಲಿ ಹೇಳಿಕೆ ನೀಡಿದ್ದಾರೆ.

ಎಬಿವಿಪಿ 54ನೇ ರಾಜ್ಯ ಸಮ್ಮೇಳನದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯನ್ನು ವಿರೋಧಿಸುವವರ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನ್, ದೇಶವನ್ನ 'ಧರ್ಮಶಾಲೆ'ಯನ್ನಾಗಿ ಮಾಡಬೇಕಾ? ಭಗತ್ ಸಿಂಗ್ ಹಾಗೂ ಸುಭಾಸ್ ಚಂದ್ರ ಬೋಸ್​ರ ತ್ಯಾಗ ವ್ಯರ್ಥವಾಗಬೇಕೆ? ಅವರೆಲ್ಲ ಹೋರಾಟ ಮಾಡಿರುವುದು ಸ್ವಾತಂತ್ರ್ಯಕ್ಕಾಗಿಯೇ ಹೊರತು 70 ವರ್ಷಗಳ ಬಳಿಕ ಯಾರ್ಯಾರು ಭಾರತದ ಪ್ರಜೆಗಳು ಎಂದು ಎಣಿಸುತ್ತಾ ಕುಳಿತುಕೊಳ್ಳಲ್ಲ. ಭಾರತದಲ್ಲಿ ಯಾರು ಬೇಕಾದರೂ ಬಂದು ನೆಲಸಲು ಸಾಧ್ಯವಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾರು "ಭಾರತ್ ಮಾತಾ ಕಿ ಜೈ" ಎಂದು ಹೇಳಲು ಸಿದ್ಧರಿದ್ದಾರೋ ಅವರು ಮಾತ್ರ ನಮ್ಮ ದೇಶದಲ್ಲಿರಲು ಸಾಧ್ಯ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್​, ತನ್ನ 134ನೇ ಸಂಸ್ಥಾಪನಾ ದಿನವಾದ ನಿನ್ನೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು.

ABOUT THE AUTHOR

...view details