ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಪ್ರಜಾಪ್ರಭುತ್ವ ಪುನಃಸ್ಥಾಪಿಸಲು ರಾಹುಲ್ ಗಾಂಧಿಯಿಂದ ಮಾತ್ರ ಸಾಧ್ಯ: ಟಿಪಿಸಿಸಿ

ರಾಹುಲ್ ಅವರಂತಹ ಪ್ಯಾನ್ ಇಂಡಿಯಾ ಸ್ವೀಕಾರಾರ್ಹ ನಾಯಕ ಎಐಸಿಸಿ ಅಧ್ಯಕ್ಷರಾಗಿರಬೇಕು ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ನಾಯಕರು ಹೇಳಿದ್ದಾರೆ.

Rahul Gandhi
ರಾಹುಲ್ ಗಾಂಧಿ

By

Published : Dec 21, 2020, 6:54 AM IST

ಹೈದರಾಬಾದ್ (ತೆಲಂಗಾಣ): ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ನಾಯಕರು ರಾಹುಲ್ ಗಾಂಧಿ ಅವರ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವವನ್ನು "ಪುನಃ ಸ್ಥಾಪಿಸಬಹುದು" ಎಂದು ಹೇಳಿದ್ದಾರೆ.

ಡಿಸೆಂಬರ್ 20 ದಂದು ಬರೆದ ಪತ್ರದಲ್ಲಿ 'ಚಿಂತನ್ ಬೈಠಕ್' ಒಪ್ಪಿಕೊಂಡಿದ್ದಕ್ಕಾಗಿ ಟಿಪಿಸಿಸಿ ನಾಯಕರು ಸೋನಿಯಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಪಕ್ಷದ ಮಹತ್ವವನ್ನು ಒತ್ತಿಹೇಳಿದ ನಾಯಕರು, ದೇಶದಲ್ಲಿ "ರಾಜಕೀಯ ಬಿಕ್ಕಟ್ಟು" ಎದುರಾಗಿದ್ದು, ರಾಹುಲ್ ಅವರಂತಹ "ಪ್ಯಾನ್ ಇಂಡಿಯಾ ಸ್ವೀಕಾರಾರ್ಹ ನಾಯಕ" ಎಐಸಿಸಿ ಅಧ್ಯಕ್ಷರಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಚಿಂತನ್ ಬೈಠಕ್ ಹೊಂದಲು ಒಪ್ಪಿಕೊಂಡಿದ್ದಕ್ಕಾಗಿ ನಾವು ನಿಮಗೆ ಕೃತಜ್ಞರಾಗಿರುತ್ತೇವೆ. ಕಾಂಗ್ರೆಸ್ ಪಕ್ಷವು ಅವರಿಗೆ ವಹಿಸಿಕೊಟ್ಟಿರುವ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಕ್ಕಾಗಿ ರಾಹುಲ್ ಗಾಂಧಿಗೆ ನಾವು ವಿಶೇಷವಾಗಿ ಕೃತಜ್ಞರಾಗಿರುತ್ತೇವೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸಲು ರಾಹುಲ್ ಗಾಂಧಿಯವರಿಂದ ಮಾತ್ರ ಸಾಧ್ಯ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರೈತರ ಆಂದೋಲನ, ಕೊರೊನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿ, ನಿರುದ್ಯೋಗ, "ಸರ್ವಾಧಿಕಾರಿ ನಿಯಮ" ಇಂತ ಅನೇಕ ಬಿಟ್ಟುಗಳನ್ನು ದೇಶ ಎದುರಿಸುತ್ತಿದೆ. ಇದು "ರಾಹುಲ್ ಗಾಂಧಿಯಂತಹ ಪ್ಯಾನ್ ಇಂಡಿಯಾ ಸ್ವೀಕಾರಾರ್ಹ ನಾಯಕನಿಗೆ ನಾವು ಎಐಸಿಸಿ ಅಧ್ಯಕ್ಷ ಸ್ಥಾನ ಒದಗಿಸಬೇಕಾದ ಸಮಯ. ಪ್ರಸ್ತುತ ರಾಷ್ಟ್ರವು ರಾಜಕೀಯ ಬಿಕ್ಕಟ್ಟಿನಲ್ಲಿದೆ. ರಾಷ್ಟ್ರವು ಬಿಕ್ಕಟ್ಟಿನಲ್ಲಿದ್ದಾಗಲೆಲ್ಲಾ ಕಾಂಗ್ರೆಸ್ ಪಕ್ಷವು ರಾಷ್ಟ್ರವನ್ನು ಉಳಿಸಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಮುನ್ನ ಶನಿವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಪಕ್ಷದಲ್ಲಿ ಭಾರಿ ಬದಲಾವಣೆಗಳನ್ನು ಮಾಡಬೇಕೆಂದು ಕರೆ ನೀಡಿದ್ದ 23 ನಾಯಕರಲ್ಲಿ ಕೆಲವರು ಭಾಗವಹಿಸಿದ್ದರು. ಕಾಂಗ್ರೆಸ್ ಮುಂದೆ ಸಾಗಲು ರಾಹುಲ್ ಅವರ ನಾಯಕತ್ವ ಅಗತ್ಯವಾಗಿದೆ ಮತ್ತು ಸವಾಲುಗಳನ್ನು ಚರ್ಚಿಸಲು ಶೀಘ್ರದಲ್ಲೇ 'ಚಿಂತನ್ ಶಿವಿರ್'(Chintan Shivir) ಆಯೋಜಿಸಬೇಕು ಎಂಬುದು ಪಕ್ಷದ ನಾಯಕರ ಅಭಿಪ್ರಾಯವಾಗಿತ್ತು.

ಸಭೆ ಬಳಿಕ ಮಾತನಾಡಿದ್ದ ಮಾಜಿ ಕೇಂದ್ರ ಸಚಿವ ಪವನ್ ಬನ್ಸಾಲ್ "ಪಕ್ಷಕ್ಕೆ ರಾಹುಲ್ ಗಾಂಧಿ ನಾಯಕತ್ವ ಬೇಕು ಮತ್ತು ನಮ್ಮ ಅಜೆಂಡಾದಿಂದ ಗಮನವನ್ನು ಬೇರೆಡೆ ಸೆಳೆಯಲು ಬಯಸುವವರ ಬಗ್ಗೆ ನಾವು ಕಾಳಜಿ ವಹಿಸಬಾರದು ಎಂದು ಎಲ್ಲರೂ ಹೇಳಿದರು. ಸಭೆಯಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಒಟ್ಟು 19 ನಾಯಕರು ಉಪಸ್ಥಿತರಿದ್ದರು. ಕಾಂಗ್ರೆಸ್​ ಒಂದು ಕುಟುಂಬವಿದ್ದಂತೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ, ನಾವು ಒಂದು ಕುಟುಂಬದ ರೀತಿ ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದಾರೆ.

ABOUT THE AUTHOR

...view details