ಹೊಸದಿಲ್ಲಿ: ತೀವ್ರತರದ ಉಸಿರಾಟ ಸಮಸ್ಯೆಯ 5,911 ಜನರನ್ನು ಟೆಸ್ಟಿಂಗ್ ಮಾಡಿದಾಗ ಅದರಲ್ಲಿ ಕೇವಲ 104 ಪ್ರಕರಣಗಳು (ಶೇ.1.8) ಮಾತ್ರ ಕೋವಿಡ್-19 ಪಾಸಿಟಿವ್ ಆಗಿದ್ದು ಕಂಡು ಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ 104 ಸೋಂಕಿತರಲ್ಲಿ 40 ಜನ ವಿದೇಶ ಪ್ರಯಾಣ ಹಿನ್ನೆಲೆ ಅಥವಾ ವಿದೇಶದಿಂದ ಬಂದವರ ಸಂಪರ್ಕ ಹೊಂದಿಲ್ಲ ಎಂದು ಐಸಿಎಂಆರ್ ಹೇಳಿದೆ.
ತೀವ್ರ ಉಸಿರಾಟ ಸಮಸ್ಯೆ ಪ್ರಕರಣ; ಶೇ.1.8ರಷ್ಟು ಮಾತ್ರ ಕೋವಿಡ್ ದೃಢ !! - ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್
ತೀವ್ರ ಉಸಿರಾಟ ಸೋಂಕಿನ ಪ್ರಕರಣಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಮಾ.14 ಕ್ಕೂ ಮೊದಲು ಸೊನ್ನೆ ಇದ್ದದ್ದು, ಏ.2 ರ ವೇಳೆಗೆ ಶೇ.2.6 ರಷ್ಟು ಹೆಚ್ಚಾಗಿದೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೋವಿಡ್ ಸೋಂಕಿತರಲ್ಲಿ ಮೂರನೇ ಒಂದು ಭಾಗದಷ್ಟು ಜನ ವಿದೇಶ ಪ್ರಯಾಣ ಮಾಡಿಲ್ಲ ಹಾಗೂ ವಿದೇಶದಿಂದ ಬಂದವರ ಸಂಪರ್ಕ ಮಾಡಿಲ್ಲ.
ಮೇಲಿನ ಸಂಶೋಧನೆಯ ಪ್ರಕಾರ ಪುರುಷರಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಸೋಂಕು ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. 20 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 52 ಜಿಲ್ಲೆಗಳ ಪ್ರಕರಣಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಸಂಶೋಧನಾ ವರದಿಯು ಇತ್ತೀಚಿನ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟವಾಗಿದೆ.
ತೀವ್ರ ಉಸಿರಾಟ ಸೋಂಕಿನ ಪ್ರಕರಣಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಮಾ.14 ಕ್ಕೂ ಮೊದಲು ಸೊನ್ನೆ ಇದ್ದದ್ದು, ಏ.2 ರ ವೇಳೆಗೆ ಶೇ.2.6 ರಷ್ಟು ಹೆಚ್ಚಾಗಿದೆ. ದೇಶದ 15 ರಾಜ್ಯಗಳಲ್ಲಿ ತೀವ್ರ ಉಸಿರಾಟ ಸೋಂಕಿನ ಪ್ರಕರಣಗಳಲ್ಲಿ ಶೇ.1 ಕ್ಕಿಂತ ಹೆಚ್ಚು ಜನ ಕೋವಿಡ್ ಪಾಸಿಟಿವ್ ಆಗಿದ್ದಾರೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೋವಿಡ್ ಸೋಂಕಿತರಲ್ಲಿ ಮೂರನೇ ಒಂದು ಭಾಗದಷ್ಟು ಜನ ವಿದೇಶ ಪ್ರಯಾಣ ಮಾಡಿಲ್ಲ ಹಾಗೂ ವಿದೇಶದಿಂದ ಬಂದವರ ಸಂಪರ್ಕ ಮಾಡಿಲ್ಲ ಎಂದು ಐಸಿಎಂಆರ್ ವರದಿಯಲ್ಲಿ ಹೇಳಲಾಗಿದೆ.