ಕರ್ನಾಟಕ

karnataka

ETV Bharat / bharat

ಕೊರೊನಾ ಹಿನ್ನೆಲೆ ಮಾರ್ಕೆಟ್​ ಬಂದ್: ಆನ್​​ಲೈನ್​​​​​ನಲ್ಲಿ ಮೇಕೆಗಳ ವ್ಯವಹಾರ ಜೋರು - ಇಂದೋರ್

ಜಾನುವಾರು ಮಾರುಕಟ್ಟೆ ಇಲ್ಲದೇ ಆನ್​​ಲೈನ್​ನಲ್ಲಿ ಆಡುಗಳ ವ್ಯಾಪಾರ ಜೋರಾಗಿ ಸಾಗಿದೆ. ಅವರಿಗೆ ಬೇಕಾದ ಆಡುಗಳ ಚಿತ್ರಗಳನ್ನ ವಾಟ್ಸ್​ಆ್ಯಪ್​ ಮೂಲಕ ಗ್ರಾಹಕರಿಗೆ ತಲುಪಿಸಿ ವ್ಯವಹಾರ ಕುದುರಿಸಲಾಗುತ್ತದೆ.

ಆನ್​​ಲೈನ್​​​ನಲ್ಲಿ ಆಡುಗಳ ಮಾರಾಟ ಜೋರು
ಆನ್​​ಲೈನ್​​​ನಲ್ಲಿ ಆಡುಗಳ ಮಾರಾಟ ಜೋರು

By

Published : Jul 7, 2020, 7:38 AM IST

Updated : Jul 7, 2020, 9:21 AM IST

ಇಂದೋರ್ (ಮಧ್ಯಪ್ರದೇಶ):ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಕ್ರೀದ್​​ (ಈದ್ -ಉಲ್-ಅಧಾ) ಹಬ್ಬದ ನಿಮಿತ್ತ ಆಡುಗಳ ಆನ್​​ಲೈನ್​​ ಮಾರಾಟ ಜೋರಾಗಿ ಸಾಗಿದೆ. ಸೋಷಿಯಲ್​ ಮೀಡಿಯಾಗಳನ್ನ ಬಳಕೆ ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ.

ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಕ್ರೀದ್​​ಗೆ ಸ್ಥಳೀಯ ಮಾರುಕಟ್ಟೆಗಳನ್ನ ತೆರೆಯಲಾಗಿಲ್ಲ. ಪರಿಣಾಮ ಹಬ್ಬದ ಆಚರಣೆಗಾಗಿ ಜನ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು, ವಾಟ್ಸ್​ಆ್ಯಪ್​ ಹಾಗೂ ಇನ್​​​ಸ್ಟಾಗ್ರಾಂ, ಫೇಸ್​​​ಬುಕ್​ಗಳ ಮೂಲಕ ಆಡುಗಳ ಚಿತ್ರ ಹಾಗೂ ವಿಡಿಯೋ ಕಳುಹಿಸಿ ಅದರ ದಷ್ಟಪುಷ್ಟತೆಯ ಆಧಾರದ ಮೇಲೆ ದರ ನಿಗದಿ ಮಾಡಿ ಮಾರಾಟ ಮಾಡಲಾಗುತ್ತದೆ.

ಬಕ್ರೀದ್​​​​​​​​​ಗೆ ಮುನ್ನವೇ ಆನ್​​ಲೈನ್​​​ನಲ್ಲಿ ಆಡುಗಳ ಮಾರಾಟ ಜೋರು

ಜಾನುವಾರಿನ ಮಾರುಕಟ್ಟೆ ಇಲ್ಲದೇ ಇರುವುದರಿಂದ ಗ್ರಾಹಕರಿಗೆ ಬೇಕಾದ ಆಡುಗಳ ಚಿತ್ರಗಳನ್ನ ವಾಟ್ಸ್​ಆ್ಯಪ್​ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಗ್ರಾಹಕ ಸಾಮಾಜಿಕ ಜಾಲತಾಣದ ಮೂಲಕವೇ ತಮ್ಮಿಷ್ಟದ ಆಡನ್ನ ಕೊಂಡುಕೊಳ್ಳಬಹುದು ಅಂತಾರೆ ಮೇಕೆ ಉದ್ಯಮಿ ಆರೀಫ್​ ಖಾನ್​.

ಹೀಗೆ ನಡೆಯುತ್ತೆ ವ್ಯವಹಾರ:

ಅವರು ಹೇಳುವಂತೆ "ವಾಟ್ಸ್​ ಆ್ಯಪ್​ ಗ್ರೂಪ್​ ರಚನೆ ಆಗಿದ್ದು, ಇದರಲ್ಲಿ ವ್ಯಾಪಾರಿಗಳು ತಮ್ಮ ಆಡಿನ ಫೋಟೋಗಳು, ವಿಡಿಯೋಗಳನ್ನ ಜೊತೆಗೆ ಅದರ ಬೆಲೆಗಳನ್ನ ಪೋಸ್ಟ್ ಮಾಡುತ್ತಾರೆ. ಮೇಕೆ ಇಷ್ಟಪಡುವ ಗುಂಪಿನ ಸದಸ್ಯರು ಮಾರಾಟಗಾರನನ್ನು ಸಂಪರ್ಕಿಸುತ್ತಾರೆ. ಮೇಕೆ ಪರೀಕ್ಷಿಸಿ ಖರೀದಿ ಮಾಡ್ತಾರೆ. ಒಂದು ಮೇಕೆ ಬೆಲೆ 8,000 ರಿಂದ 15,000 ರೂ. ವರೆಗೆ ನಿಗದಿ ಮಾಡಲಾಗಿದೆ. ಪ್ರತಿವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 30 ರಷ್ಟು ದರ ಇಳಿಕೆ ಕಂಡಿದೆ ಅಂತಾರೆ ಮೇಕೆ ಉದ್ಯಮಿ ಖಾನ್​

Last Updated : Jul 7, 2020, 9:21 AM IST

ABOUT THE AUTHOR

...view details