ನವದೆಹಲಿ :ನೀತಿಗಳ ಮೂಲಕ ಸಮಾಜದಲ್ಲಿ ಭೀತಿ ಉಂಟು ಮಾಡುವವರು ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್' ಹೊರತು ರೈತರಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ರೈತರ ಪ್ರತಿಭಟನೆಯನ್ನು ದುರಪಯೋಗಪಡಿಸಿಕೊಂಡು ದೇಶವನ್ನು ಒಡೆಯುವ ತುಕ್ಡೆ ತುಕ್ಡೆ ಗ್ಯಾಂಗ್ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ನಿನ್ನೆಯಷ್ಟೇ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿಬಲ್, "ಮಾನ್ಯ ಮಂತ್ರಿಗಳೇ, ಪ್ರತಿಯೊಬ್ಬ ನಾಗರಿಕನನ್ನು ಎರಡು ದೃಷ್ಟಿಕೋನಗಳಿಂದ ನೋಡುವವನು, ಸಮಾಜದಲ್ಲಿ ದ್ವೇಷವನ್ನು ಹರಡುವವನು, ನೀತಿಗಳ ಮೂಲಕ ಸಮಾಜದಲ್ಲಿ ಭೀತಿ ಉಂಟು ಮಾಡುವವನು, ಗೋಡ್ಸೆಯನ್ನು ಹೊಗಳುವವನು ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್, ನಮ್ಮ ರೈತರಲ್ಲ" ಎಂದು ಟ್ವೀಟ್ ಮಾಡಿದ್ದಾರೆ.