ಶ್ರೀನಗರ(ಜಮ್ಮು ಕಾಶ್ಮೀರ):ಬೆಳ್ಳಂಬೆಳಗ್ಗೆ ನಡೆದ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೇನಾಪಡೆ ಹೊಡೆದುರುಳಿಸಿದೆ.
ನಿಖರ ಮಾಹಿತಿ ಆಧರಿಸಿ ಸೇನಾಪಡೆ ಪುಲ್ವಾಮಾ ಜಿಲ್ಲೆಯ ಪ್ಯಾಂಪೋರ್ ಬಳಿಯ ಮೀಜ್ ಗ್ರಾಮದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆಸಿತ್ತು. ಈ ವೇಳೆ, ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಓರ್ವ ಭಯೋತ್ಪಾದಕನನ್ನು ಸೇನೆ ಗುಂಡಿಕ್ಕಿ ಕೊಂದಿದೆ.