ಕೋಲ್ಕತ್ತಾ:ಜೆಎನ್ಯು ಹಿಂಸಾಚಾರವನ್ನು ಖಂಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಗೂಂಡಾಗಳನ್ನು ಕಳುಹಿಸಿ, ದೆಹಲಿ ಪೊಲೀಸರನ್ನು ನಿಷ್ಕ್ರಿಯಗೊಳಿಸಿದರು: ದೀದಿ ಆರೋಪ - ಮಮತಾ ಬ್ಯಾನರ್ಜಿ ಹೇಳಿಕೆ ಸುದ್ದಿ
ದೆಹಲಿ ಪೊಲೀಸರು ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವ್ಯಾಪ್ತಿಯಲ್ಲಿಲ್ಲ. ಬದಲಾಗಿ ಅವರು ಕೇಂದ್ರ ಸರ್ಕಾರದ ಕೈಕೆಳಗಿದ್ದಾರೆ. ಒಂದೆಡೆ ಅವರು ಬಿಜೆಪಿ ಗೂಂಡಾಗಳನ್ನು ಕ್ಯಾಂಪಸ್ಗೆ ಕಳಿಸಿದ್ದಾರೆ. ಮತ್ತೊಂದೆಡೆ ಅವರು ಪೊಲೀಸರನ್ನೇ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜೆಎನ್ಯು ಹಿಂಸಾಚಾರ ಸಂಬಂಧ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ದೆಹಲಿ ಪೊಲೀಸರು ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೆಳಗಿಲ್ಲ. ಬದಲಾಗಿ ಅವರು ಕೇಂದ್ರ ಸರ್ಕಾರದ ಕೈಕೆಳಗಿದ್ದಾರೆ. ಒಂದೆಡೆ ಅವರು ಬಿಜೆಪಿ ಗೂಂಡಾಗಳನ್ನು ಕ್ಯಾಂಪಸ್ಗೆ ಕಳುಹಿಸಿದ್ದಾರೆ. ಮತ್ತೊಂದೆಡೆ ಅವರು ಪೊಲೀಸರನ್ನೇ ನಿಷ್ಕ್ರಿಯಗೊಳಿಸದ್ದಾರೆ ಎಂದು ದೀದಿ ಆರೋಪಿಸಿದ್ದಾರೆ.
ಮೇಲ್ಗಡೆಯಿಂದ ಆದೇಶ ಬಂದರೆ ಪೊಲೀಸರಾದರೂ ಏನು ಮಾಡುತ್ತಾರೆ. ಇದು 'ಫ್ಯಾಸಿಸ್ಟ್ ಸರ್ಜಿಕಲ್ ಸ್ಟ್ರೈಕ್' ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.