ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆ ಜೂನ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ದೇಶಾದ್ಯಂತ ಜೂನ್ 1ರಿಂದ 'ಒನ್ ನೇಷನ್, ಒನ್ ರೇಷನ್ ಕಾರ್ಡ್' ಯೋಜನೆ ಜಾರಿ!
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಜೂನ್ 1ರಿಂದ ದೇಶಾದ್ಯಂತ ಜಾರಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ಯೋಜನೆ ಭಾಗವಾಗಿ ದೇಶದ ಎಲ್ಲ ಪಡಿತರ ಚೀಟಿದಾರರಿಗೂ ಒಂದೇ ಮಾದರಿಯ ರೇಷನ್ ಕಾರ್ಡ್ ನೀಡಲು ನಿರ್ಧರಿಸಲಾಗಿದ್ದು, ಹಳೇ ರೇಷನ್ ಕಾರ್ಡ್ ಸಹ ಮಾನ್ಯವಾಗಿರುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಾಸ್ವಾನ್ ತಿಳಿಸಿದ್ದಾರೆ.
2020ರ ಜನವರಿ 1ರಿಂದಲೇ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್,ಮಹಾರಾಷ್ಟ್ರ,ಹರಿಯಾಣ, ರಾಜಸ್ಥಾನ,ಕರ್ನಾಟಕ,ಕೇರಳ,ಮಧ್ಯಪ್ರದೇಶ,ಗೋವಾ, ಜಾರ್ಖಂಡ್ ಹಾಗೂ ತ್ರಿಪುರ್ಗಳಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಸೌಲಭ್ಯ ಈಗಾಗಲೇ ನೀಡಲಾಗಿದ್ದು, ರಾಜ್ಯದ ಯಾವುದೇ ಪಡಿತರ ಅಂಗಡಿಯಲ್ಲಿ ಅವರು ಆಹಾರ ಪಡೆದುಕೊಳ್ಳಬಹುದಾಗಿದೆ.