ಕರ್ನಾಟಕ

karnataka

ETV Bharat / bharat

ವಿಮಾನದ ಸೀಟಿನ ಕೆಳಗೆ ಸಿಕ್ತು ಒಂದು ಕೆಜಿ ಚಿನ್ನ! - ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನವೊಂದರಲ್ಲಿ ಅಪರಿಚಿತರೊಬ್ಬರು ಬಿಟ್ಟು ಹೋದ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದೆ. ಸೀಟಿನಡಿಯಲ್ಲಿ ಈ ಚಿನ್ನ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದಾರೆ.

One kilo gold worth 50 lakhs found under Indigo airplane seat
ಪತ್ತೆಯಾದ ಚಿನ್ನಾಭರಣ

By

Published : Dec 4, 2020, 6:21 PM IST

ಚೆನ್ನೈ (ತಮಿಳುನಾಡು): ಇಂಡಿಗೋ ವಿಮಾನ ಸ್ವಚ್ಛ ಮಾಡುತ್ತಿದ್ದ ಸಿಬ್ಬಂದಿಗೆ 50 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನ ಸಿಕ್ಕಿದೆ.

ಪತ್ತೆಯಾದ ಚಿನ್ನ

ದುಬೈನಿಂದ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗ್ಗೆ ಬಂದಿಳಿದ ವಿಮಾನವನ್ನು ಅಲ್ಲಿನ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾಗ ಈ ಪ್ರಮಾಣದ ಚಿನ್ನ ದೊರೆತಿದೆ. ಎಂದಿನಂತೆ ಪ್ರಯಾಣಿಕರು ವಿಮಾನದಿಂದ ಕೆಳಗಿಳಿದು ತೆರಳಿದಾಗ ಅಲ್ಲಿನ ಸಿಬ್ಬಂದಿ ಸ್ವಚ್ಛಗೊಳಿತ್ತಿದ್ದರು. ಆಸನದ ಕೆಳಗೆ ಪಾರ್ಸಲ್​ ವಸ್ತು ಕಂಡು ಸಿಬ್ಬಂದಿ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ 50 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನ ಇರುವುದು ಗೊತ್ತಾಗಿದೆ.

ಇದನ್ನೂ ಓದಿ : ಮಾರಕಾಸ್ತ್ರ ಹಿಡಿದು ದರೋಡೆಗೆ ಸಜ್ಜಾಗಿದ್ದವರ ಪ್ಲಾನ್ ವಿಫಲಗೊಳಿಸಿದ ಸಿಸಿಬಿ

ಅನುಮಾನ ವ್ಯಕ್ತವಾಗಿದ್ದರಿಂದ ದುಬೈನಿಂದ ಆಗಮಿಸಿದ್ದ ಪ್ರಯಾಣಿಕರ ಪರಿಶೀಲನೆಗೆ ಮುಂದಾದ ಕಸ್ಟಮ್ಸ್ ಅಧಿಕಾರಿಗಳಿಗೆ ಮತ್ತೆ 10 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಸಿಕ್ಕಿದೆ. ವೆಲ್ಲೂರು ಮೂಲದ ಪ್ರಯಾಣಿಕ ವಿವೇಕ್ ಮನೋಕಾರನ್ ಎಂಬಾತ ತನ್ನ ಬೂಟುಗಳಲ್ಲಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನಿಂದ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು, ಆತನನ್ನು ಬಂಧಿಸಿದ್ದಾರೆ. ವಿಮಾನದ ಸೀಟಿನ ಕೆಳಗೆ ಚಿನ್ನ ಇಟ್ಟು ಹೋದ ವ್ಯಕ್ತಿಗಾಗಿ ಶೋಧನೆ ನಡೆಸಿದ್ದಾರೆ.

ABOUT THE AUTHOR

...view details