ಚೆನ್ನೈ:ದುಬೈನಿಂದ ವಿಮಾನದಲ್ಲಿ ಭಾರತಕ್ಕೆ ಬಂದ ಚಿನ್ನ ಕಳ್ಳಸಾಗಣೆದಾರ ಮತ್ತು ಆತನಿಗೆ ಸಹಾಯ ಮಾಡಿದ್ದ ನಾಲ್ವರು ಭಾರತೀಯರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ 52 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ 1 ಕೆಜಿ ಚಿನ್ನ ತಂದ... ಕ್ವಾರಂಟೈನ್ಗೆ ಕರೆದೊಯ್ಯುವಾಗ ಸಿಕ್ಕಿಬಿದ್ದ! - yellow metal into the country from Dubai
ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಒಂದು ಕೆಜಿ ಚಿನ್ನವನ್ನು ತಂದಿದ್ದ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದು, ಆತನಿಗೆ ಸಹಾಯ ಮಾಡಿದ ನಾಲ್ವರನ್ನು ಬಂಧಿಸಲಾಗಿದೆ.
ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಎಲ್ಲಾ 180 ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಕಾಂಚೀಪುರಂ ಜಿಲ್ಲೆಯಲ್ಲಿನ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಬ್ಯಾಗ್ನಲ್ಲಿ ಇರುವುದು ಔಷಧಿ ಮತ್ತು ಹಳೆಯ ನಿಷ್ಕ್ರೀಯಗೊಂಡ ಕೈಗಡಿಯಾರಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಎಂದಿದ್ದ. ನಿರಂತರ ವಿಚಾರಣೆ ಬಳಿಕ ಆರೋಪಿ ತಪ್ಪೊಪ್ಪಿಗೊಂಡಿದ್ದು, ಈತನಿಗೆ ಸಹಾಯ ಮಾಡಿದ ನಾಲ್ವರನ್ನು ಬಂಧಿಸಲಾಗಿದೆ.