ಶಂಕಿತ ಕೊರೊನಾಗೆ ದೇಶದಲ್ಲಿ ಮತ್ತೊಂದು ಬಲಿ! - ಶಂಕಿತ ಕೊರೊನಾ ಸುದ್ದಿ
ಕೊರೊನಾ
07:30 March 16
ಶಂಕಿತ ಕೊರೊನಾಗೆ ದೇಶದಲ್ಲಿ ಮತ್ತೊಂದು ಬಲಿ!
ಕೊಲ್ಲಾಪುರ್(ಮಹಾರಾಷ್ಟ್ರ):ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಂಕಿತ ಕೊರೊನಾದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಲ್ಲಿನ ಪ್ರಮೀಳ ರಾಜೆ ಆಸ್ಪತ್ರೆಯ ವಿಶೇಷ ವಾರ್ಡ್ನಲ್ಲಿ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಸ್ಯಾಂಪಲ್ ವರದಿ ಇನ್ನೆರಡು ದಿನಗಳ ಬಳಿಕ ಬರಬೇಕಿದೆ.
ಮೃತ ವ್ಯಕ್ತಿಗೆ 68 ವರ್ಷ ವಯಸ್ಸಾಗಿದ್ದು, ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ. ಹರಿಯಾಣ, ದೆಹಲಿ, ಮುಂಬೈ ಹಾಗೂ ಪುಣೆ ನಗರಗಳಿಗೆ ಭೇಟಿ ನೀಡಿ ಕೊಲ್ಲಾಪುರಕ್ಕೆ ಬಂದಿದ್ದರಂತೆ.
Last Updated : Mar 16, 2020, 9:41 AM IST